ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಶನಿವಾರ ನಡೆದ ಕೊರಿಯಾ ಓಪನ್ ಸುಪರ್ ಸಿರೀಸ್ನ ಸೆಮಿಫೈನಲ್ನಲ್ಲಿ ಚೀನಾ ಆಟಗಾರ್ತಿಯನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.
ಚೀನಾದ ಹಿ ಬಿಂಗ್ಜಿಯವೊ ಅವರನ್ನು 21-10,17-21,21-16ರಲ್ಲಿ ಸೋಲಿಸಿದ ಸಿಂಧೂ ಫೈನಲ್ ಪ್ರವೇಶಿಸಿದ್ದಾರೆ.
ಕಳೆದ ತಿಂಗಳು ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಸಿಂಧು ಕೊರಿಯಾ ಓಪನ್ ಸಿರಿಸ್ ಫೈನಲ್ನಲ್ಲಿ ಜಪಾನಿನ ನಝೋಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ.
ಕೊರಿಯ ಓಪನ್ ಸಿರೀಸ್ ಪ್ರಶಸ್ತಿ ಯುಎಸ್ಟಿ 600,000 ಬಹುಮಾನವನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.