ಗುವಾಹಟಿ: ಸರ್ಕಾರಿ ಉದ್ಯೋಗಿಗಳು ತಮ್ಮ ಹೆತ್ತವರ ಮತ್ತು ವಿಕಲಚೇತನರಾಗಿರುವ ಒಡಹುಟ್ಟಿದವರ ಕಾಳಜಿ, ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಮಾಡುವ ಮಸೂದೆಯನ್ನು ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕರಿಸಲಾಗಿದೆ.
ಹೆತ್ತವರನ್ನು, ದಿವ್ಯಾಂಗ ಸಹೋದರ ಅಥವಾ ಸಹೋದರಿಯರನ್ನು ನೋಡಿಕೊಳ್ಳಲು ವಿಫಲರಾಗುವ ಉದ್ಯೋಗಿಗಳ ಮಾಸಿಕ ವೇತನದಲ್ಲಿ ಶೇ.10ರಷ್ಟು ಕಡಿತ ಮಾಡಲಾಗುತ್ತದೆ. ಈ ಕಡಿತವಾದ ಮೊತ್ತವನ್ನು ಅವರ ಹೆತ್ತವರಿಗೆ ಅಥವಾ ದಿವ್ಯಾಂಗ ಒಡಹುಟ್ಟಿದವರಿಗೆ ನೀಡುವ ನಿಯಮವನ್ನು ಮಸೂದೆ ಒಳಗೊಂಡಿದೆ.
ವಯಸ್ಸಾದವರು ವೃದ್ಧಾಶ್ರಮಗಳಿಗೆ ಹೋಗುವುದನ್ನು, ದಿವ್ಯಾಂಗರು ದಿಕ್ಕು ದೆಸೆಯಿಲ್ಲದೆ ಅನಾಥಾಶ್ರಮ ಸೇರುವುದನ್ನು ತಪ್ಪಿಸುವ ಸಲುವಾಗಿ ಈ ಮಹತ್ವದ ಮಸೂದೆಯನ್ನು ಅಲ್ಲಿ ಜಾರಿಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.