ಶಿರಡಿ: ಶಿರಡಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಅಕ್ಟೋಬರ್ 1ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ.
ಪ್ರತಿನಿತ್ಯ 500 ಭಕ್ತರು ಮತ್ತು ಪ್ರಯಾಣಿಕರು ಈ ವಿಮಾನನಿಲ್ದಾಣದಲ್ಲಿ ವಾಯುಸೇವೆಯನ್ನು ಪಡೆಯುವ ನಿರೀಕ್ಷೆಯನ್ನು ಹೊಂದಲಾಗಿದೆ. ಇಲ್ಲಿ ಮುಂಬಯಿ, ದೆಹಲಿ, ಹೈದರಾಬಾದ್ನಿಂದ 12 ಸೇವೆಗಳನ್ನು ನೀಡಲಾಗುತ್ತದೆ.
ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾರಾಷ್ಟ್ರ ಏರ್ಪೋರ್ಟ್ ಡೆವಲಪ್ಮೆಂಟ್ ಕಂಪನಿ ಇದನ್ನು ನಿರ್ಮಾಣ ಮಾಡಿದೆ. ಇದರಲ್ಲಿ 50ಕೋಟಿ ರೂಪಾಯಿಗಳನ್ನು ಶ್ರೀಸಾಯಿಬಾಬಾ ಸಂಸ್ಥಾನ ಕೊಡುಗೆಯಾಗಿ ನೀಡಿದೆ.
ಇದರಲ್ಲಿ 3,200 ಮೀಟರ್ ರನ್ವೇ ಇದ್ದು, 2,750 Sq.mtr ನಲ್ಲಿ ಟರ್ಮಿನಲ್ ಬಿಲ್ಡಿಂಗ್ ಇದೆ. 4 ವಿಮಾನ ನಿಲ್ಲಲು ಸ್ಥಳವಕಾಶವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.