ನವದೆಹಲಿ: ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಸಚಿವಾಲಯ ಗುರುವಾರ ಸ್ವಚ್ಛತಾ ರ್ಯಾಂಕಿಂಗ್ನ್ನು ಘೋಷಣೆ ಮಾಡಿದೆ. 3500 ಸಂಸ್ಥೆಗಳ ಪೈಕಿ ಕೇವಲ 25 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಕೆಎಲ್ಇ ಅಕಾಡಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ಕೂಡ ಒಂದು.
ಆಯ್ಕೆಗೊಂಡ ಹೆಚ್ಚಿನ ಸಂಸ್ಥೆಗಳು ತಮಿಳುನಾಡಿನದ್ದಾಗಿವೆ. ಒಂದೇ ಒಂದು ಸರ್ಕಾರಿ ಸಂಸ್ಥೆ ಟಾಪ್ 50ರಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದೆ. 25 ಸಂಸ್ಥೆಗಳನ್ನು 4 ವಿವಿಧ ಕೆಟಗರಿಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನಿಷ್ಠ 15 ಗಂಟೆಗಳ ನೀರು ಸರಬರಾಜಿನೊಂದಿಗೆ ವಿದ್ಯಾರ್ಥಿ/ಟಾಯ್ಲೆಟ್ ಅನುಪಾತ ಪ್ರಮುಖ ಕೆಟಗರಿಯಾಗಿದೆ.
ಯೂನಿವಸಿಟಿ ಕೆಟಗರಿಗಳ ಪೈಕಿ ಸೋನಿಪತ್ನ ಓಪಿ ಜಿಂದಾಲ್ ಯೂನಿವರ್ಸಿಟಿ, ಜೈಪುರದ ಮಣಿಪಾಲ್ ಯೂನಿವಸಿಟಿ, ಹಿಮಾಚಲದ ಚಿತ್ಕಾರ ಯೂನಿವಸಿಟಿ, ಬೆಳಗಾವಿಯ ಕೆಎಲ್ಇ, ಆಗ್ರಾದ ದಯಾಳ್ಭಾಗ್ ಶಿಕ್ಷಣ ಸಂಸ್ಥೆ ಕ್ರಮವಾಗಿ ರ್ಯಾಕಿಂಗ್ ಪಟ್ಟಿಯಲ್ಲಿದೆ.
ಕಾಲೇಜು ಕೆಟಗರಿಯಲ್ಲಿ ತಮಿಳುನಾಡಿನ ಕೊಂಗು ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು, ಮಹಾರಾಷ್ಟ್ರದ ವಿದ್ಯಾ ಪ್ರತಿಷ್ಠಾನ, ಚೆನ್ನೈನ ರಾಮಕೃಷ್ಣ ಮಿಶನ್ ಕಾಲೇಜು, ವಿವೇಕಾನಂದ ಕಾಲೇಜುಗಳು ಸ್ಥಾನಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.