ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರಧಾನಿ ಶಿಂಜೋ ಅಬೆಯವರೊಂದಿಗೆ ಸೇರಿ ಗುರುವಾರ ಬೆಳಿಗ್ಗೆ ಗುಜರಾತಿನ ಅಹ್ಮದಾಬಾದ್ನಲ್ಲಿ ಭಾರತದ ಮೊತ್ತ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮೋದಿ, ಜಪಾನ್ ಭಾರತದ ನಿಜವಾದ ಸ್ನೇಹಿತ ಎಂದು ಬಣ್ಣಿಸಿದರು. ಬುಲೆಟ್ ಟ್ರೈನ್ ದೇಶಕ್ಕೆ ಸ್ಪೀಡ್ ಮತ್ತು ಜಾಬ್ ಎರಡನ್ನೂ ತಂದುಕೊಡಲಿದೆ ಎಂದರು.
ಅಬೆ ಮಾತನಾಡಿ, ‘ಬಲಿಷ್ಠ ಭಾರತ ಜಪಾನ್ಗೆ ಉತ್ತಮ, ಬಲಿಷ್ಠ ಜಪಾನ್ ಭಾರತಕ್ಕೆ ಉತ್ತಮ’ ಎಂದರು.
ಮುಂಬಯಿ-ಅಹ್ಮದಾಬಾದ್ ನಡುವಣ 508 ಕಿಲೋಮೀಟರ್ ಹೈ ಸ್ಪೀಡ್ ರೈಲ್ ಲಿಂಕ್ ಇದಾಗಿದ್ದು, ಭಾರತಕ್ಕೆ ಹೈಟೆಕ್ ಪ್ರಾಜೆಕ್ಟ್ಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಲಿದೆ.
ಅಲ್ಲದೇ ಈ ಯೋಜನೆ ಭಾರತ ಮತ್ತು ಜಪಾನ್ ನಡುವೆ ವೃದ್ಧಿಯಾಗುತ್ತಿರುವ ಬಾಂಧವ್ಯದ ಸಂಕೇತವೂ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.