ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ 2018ರೊಳಗೆ ದೇಶದಾದ್ಯಂತದ 1.55ಲಕ್ಷ ಪೋಸ್ಟ್ ಆಫೀಸುಗಳಲ್ಲಿ ಹಣಕಾಸು ಸೇವೆಗಳನ್ನು ಒದಗಿಸಲು ಸಜ್ಜಾಗಿದೆ. ಈ ಮೂಲಕ ಇದು ದೇಶದ ಎರಡನೇ ಅತೀದೊಡ್ಡ ಪೇಮೆಂಟ್ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಪಿ ಸಿಂಗ್, ‘ಮಾರ್ಚ್ 2018ರೊಳಗೆ ಎಲ್ಲಾ ಪೋಸ್ಟ್ ಬ್ಯಾಂಕುಗಳು ಫೂಟ್ಪ್ರಿಂಟ್ ಪಡೆಯಲಿದೆ. ಈ ವರ್ಷದ ಅಂತ್ಯದೊಳಗೆ 1.55 ಲಕ್ಷ ಪೋಸ್ಟ್ ಆಫೀಸುಗಳು, ಪ್ರತಿ ಪೋಸ್ಟ್ಮೆನ್ಗಳು, ಗ್ರಾಮೀಣ್ ದಾಕ್ ಸೇವಕ್ಗಳು ಫುಲ್ ರೇಂಜ್ ಪೇಮೆಂಟ್ ಸೊಲ್ಯೂಷನ್ ನೀಡುವ ಡಿವೈಸ್ ಪಡೆಯಲಿದ್ದಾರೆ’ ಎಂದರು.
ತಲಾ ಒಂದು ವ್ಯಕ್ತಿಗಳ ಅಥವಾ ವ್ಯಾವಹಾರಿಕ ಸಂಸ್ಥೆಗಳ ಅಕೌಂಟ್ನಿಂದ ಈ ಪೇಮೆಂಟ್ ಬ್ಯಾಂಕ್ 1 ಲಕ್ಷ ರೂಪಾಯಿವರೆಗಿನ ಡಿಪೋಸಿಟ್ ಸ್ವೀಕರಿಸಲಿದೆ. 25 ಸಾವಿರ.ರೂವರೆಗಿನ ಡಿಪೋಸಿಟ್ಗೆ ಶೇ.4.5ರಷ್ಟು ಬಡ್ಡಿ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.