ನವದೆಹಲಿ: 3 ವರ್ಷಗಳ ಹಿಂದೆ ಜನ್ಧನ್ ಯೋಜನೆ ಆರಂಭವಾದ ದಿನದಿಂದ ಇದುವರೆಗೆ ದೇಶದ 30 ಕೋಟಿ ಕುಟುಂಬಗಳು ಬ್ಯಾಂಕಿನಲ್ಲಿ ಅಕೌಂಟ್ ತೆರೆದಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜನ್ಧನ್ ಯೋಜನೆ ಆರಂಭವಾಗುವುದಕ್ಕೂ ಮುನ್ನ ದೇಶದ ಶೇ.42ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ, ಆದರೆ ಈ ಯೋಜನೆ ಇಂತಹ ಕುಟುಂಬಗಳನ್ನು ತಲುಪುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು.
ಶೂನ್ಯ ಮೊತ್ತದಿಂದ ಈ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. ಆದರೀಗ ಶೂನ್ಯ ಖಾತೆಗಳ ಸಂಖ್ಯೆ ಶೇ.77ರಿಂದ ಶೇ.20ಕ್ಕೆ ಇಳಿಕೆಯಾಗಿದೆ. ನೇರ ಫಲಾನುಭವ ವರ್ಗಾವಣೆಯ ಬಳಿಕ ಈ ಖಾತೆಗಳು ಕ್ರಿಯಾಶೀಲವಾಗಿದೆ ಎಂದಿದ್ದಾರೆ.
2014ರ ಸೆಪ್ಟಂಬರ್ನಲ್ಲಿ ಯೋಜನೆ ಆರಂಭವಾದ 3 ತಿಂಗಳ ಬಳಿಕ ಶೂನ್ಯ ಖಾತೆಗಳ ಪ್ರಮಾಣ ಶೇ.77ರಷ್ಟಿತ್ತು. ಈಗ ಅದು ಶೇ.20ಕ್ಕೆ ಇಳಿಮುಖವಾಗಿದೆ ಎಂದಿದ್ದಾರೆ.
ಪ್ರಸ್ತುತ ಶೇ.99.99ರಷ್ಟು ಮನೆಗಳಲ್ಲಿ ಕನಿಷ್ಠ ಒಂದಾದರು ಬ್ಯಾಂಕ್ ಅಕೌಂಟ್ಗಳಿವೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.