Thursday, 14th November 2019
×
Home About Us Advertise With s Contact Us

ಪಾಕ್ ರಾಷ್ಟ್ರಪತಿ ಮಗನನ್ನು ಗುರಿಯಾಗಿರಿಸಿ ದಾಳಿ: 3 ಬಲಿ

pakಕರಾಚಿ: ಪಾಕಿಸ್ಥಾನದ ರಾಷ್ಟ್ರಪತಿ ಮಮ್ನೂನ್ ಹುಸೇನ್ ಅವರ ಮಗ ಸಲ್ಮಾನ್ ಮಮ್ನೂನ್ ಅವರನ್ನು ಗುರಿಯಾಗಿರಿಸಿಕೊಂಡು ಸೋಮವಾರ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರಿಮೋಟ್ ಕಂಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ.

ಘಟನೆಯಲ್ಲಿ ಸಲ್ಮಾನ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಇತರ 3 ಮಂದಿ ಹತರಾಗಿದ್ದು, 13 ಮಂದಿಗೆ ಗಾಯಗಳಾಗಿವೆ. ಕರಾಚಿಯನ್ನು ಸಂಪರ್ಕಿಸುವ ಬಲೂಚಿಸ್ತಾನ ಪ್ರಾಂತ್ಯದ ಹಬ್ ಇಂಡಸ್ಟ್ರಿಯಲ್ ಪ್ರದೇಶದ ರೆಸ್ಟೋರೆಂಟ್‌ನ ಹೊರಭಾಗದಲ್ಲಿ ಈ ಘಟನೆ ನಡೆದಿದೆ.

ರೆಸ್ಟೋರೆಂಟ್ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಒಂದರಲ್ಲಿ ಬಾಂಬ್‌ನ್ನು ಅಳವಡಿಸಲಾಗಿತ್ತು. ಸಲ್ಮಾನ್ ಈ ಭಾಗದಲ್ಲಿ ಹಾದು ಹೋಗುತ್ತಾರೆ ಎಂಬ ಸ್ಪಷ್ಟ ಮಾಹಿತಿಯ ಹಿನ್ನಲೆಯಲ್ಲಿ ಉಗ್ರರು ಬಾಂಬ್ ಅಳವಡಿಸಿದ್ದರು. ಯೋಜನೆಯಂತೆ ರಿಮೋಟ್ ಮೂಲಕ ಬಾಂಬ್ ಸ್ಫೋಟಿಸಲಾಯಿತಾದರೂ ಸಲ್ಮಾನ್ ಪಾರಾಗಿದ್ದಾರೆ.

ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಶಾಪ್‌ಗಳ ಗಾಜುಗಳು ಒಡೆದು ಹೋಗಿದೆ ಎನ್ನಲಾಗಿದೆ. ಇದುವರೆಗೆ ಯಾವ ಸಂಘಟನೆಯೂ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!