ನವದೆಹಲಿ: ಭಾರತದಲ್ಲಿ ಕುಟುಂಬ ರಾಜಕಾರಣ ಅಸ್ತಿತ್ವದಲ್ಲಿ ಇದೆ ಎಂದು ವಿದೇಶದಲ್ಲಿ ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದ್ದಾರೆ. ಒರ್ವ ವಿಫಲ ರಾಜಕೀಯ ವಂಶಸ್ಥ ತನ್ನ ರಾಜಕೀಯ ವೈಫಲ್ಯದ ಬಗ್ಗೆ ಹೇಳುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.
‘ಒರ್ವ ವಿಫಲ ರಾಜಕೀಯ ವಂಶಸ್ಥ ತನ್ನ ವಿಫಲ ರಾಜಕೀಯ ಪಯಣದ ಬಗ್ಗೆ ಯುಎಸ್ಎನಲ್ಲಿ ಹೇಳುತ್ತಿದ್ದಾನೆ’ ಎಂದಿದ್ದಾರೆ.
ಕುಟುಂಬದ ರಾಜಕೀಯ ಭಾರತದಲ್ಲಿವೆ ಎಂದು ಹೇಳಿರುವ ರಾಹುಲ್ ಅವರ ಮಾತು ಅಸಮಂಜಸ ಎಂದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಯಾವುದೇ ಕುಟುಂಬ ರಾಜಕೀಯದ ಹಿನ್ನಲೆಯಿಲ್ಲದೆ ಬಂದವರು ಎಂದಿದ್ದಾರೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯೂ ಇದೇ ರೀತಿ ಕೆಳಸ್ಥರದಿಂದ ಬಂದವರು ಎಂದಿದ್ದಾರೆ.
ಜನರು ಕಾಂಗ್ರೆಸ್ಗೆ ಮತ ಹಾಕಿಲ್ಲ, ಕುಟುಂಬ ರಾಜಕೀಯಕ್ಕೆ ಮತಹಾಕಿಲ್ಲ. ಮತದಾರರು ಎಲ್ಲರೂ ಭಾರತೀಯರು, ಅವರೇನು ಅಂತಾರಾಷ್ಟ್ರೀಯ ಮತದಾರರಲ್ಲ ಎಂದಿದ್ದಾರೆ.
ಸಮಾಜವಾದಿ, ಅಭಿಷೇಕ್ ಬಚ್ಚನ್, ಡಿಎಂಕೆ ಮುಂತಾದ ಉದಾಹರಣೆಗಳನ್ನು ನೀಡಿ ರಾಹುಲ್ ಭಾರತದಲ್ಲಿ ಕುಟುಂಬ ರಾಜಕಾರಣ ಇದೆ. ಎಲ್ಲರೂ ನನ್ನತ್ತಲೇ ಬೊಟ್ಟು ಮಾಡುವ ಅಗತ್ಯವಿಲ್ಲ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.