ನವದೆಹಲಿ: ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ MUDRA ಯೋಜನೆ ಇದುವರೆಗೆ 5.5 ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ, ಕೈಗಾರಿಕಾ ರಾಜ್ಯಗಳು ಇದರ ಹೆಚ್ಚಿನ ಫಲಾನುಭವಿಗಳಾಗಿವೆ ಎಂದು ವರದಿ ತಿಳಿಸಿದೆ.
ಕೈಗಾರಿಕಾ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮುದ್ರಾ ಯೋಜನೆಯ ಅತೀದೊಡ್ಡ ಪಲಾನುಭವಿಗಳು ಎಂದು ತಿಳಿಸಿದೆ. ಮುದ್ರಾ ಯೋಜನೆಯನ್ನು 2015ರ ಎಪ್ರಿಲ್ 8ರಂದು ಆರಂಭಿಸಲಾಗಿದ್ದು, ಅನುದಾನ ರಹಿತ ಉದ್ಯಮಗಳಿಗೆ ಅನುದಾನ ನೀಡುವುದು ಇದರ ಉದ್ದೇಶ.
ಈ ಯೋಜನೆಯಡಿ ಇದುವರೆಗೆ 3.42 ಲಕ್ಷ ಕೋಟಿ ಸಾಲಗಳನ್ನು 8 ಕೋಟಿ ಜನರಿಗೆ ಹಂಚಿಕೆ ಮಾಡಲಾಗಿದೆ, ಬಹುತೇಕ ಸಣ್ಣ ಉದ್ಯಮಿಗಳೇ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಕುಕುಟೋದ್ಯಮ, ಡೈರಿ ಮುಂತಾದುವುಗಳಿಗೆ 10 ಲಕ್ಷ ರೂಪಾಯಿವರೆಗೆ ಸಾಲ ದೊರೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.