ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 11 ವರ್ಷದ ಬಾಲಕನೊಬ್ಬ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದುಕೊಂಡಿದ್ದಾನೆ. ಈ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಪದವಿ ಪಡೆದುಕೊಂಡವ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಕ್ಯಾಲಿಪೊರ್ನಿಯಾದ ತಾನಿಷ್ಕ್ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದ ಬಾಲಕ, ಈತ ಇಲ್ಲಿನ ಅಮೆರಿಕನ್ ರಿವರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಒಟ್ಟು 1800 ವಿದ್ಯಾರ್ಥಿಗಳ ಜತೆ ಅಬ್ರಹಾಂ ತೇರ್ಗಡೆಯಾಗಿ ಪದವಿ ಪಡೆದಿದ್ದಾನೆ,
ಅಬ್ರಹಾಂ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ಅಧ್ಯಯನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕನ್ ರಿವರ್ ಕಾಲೇಜಿನ ಇತಿಹಾಸದಲ್ಲೇ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಬ್ರಹಾಂ ಅವರ ಸಾಧನೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿನಲ್ಲಿ ಅತೀವ ಆಸಕ್ತಿ ಹೊಂದಿರುವ ಅಬ್ರಹಾಂ ವೈದ್ಯ ಅಥವಾ ವೈದ್ಯಕೀಯ ಸಂಶೋಧಕನಾಗುವ ಗುರಿಯನ್ನು ಹೊಂದಿದ್ದಾನೆ, ಅಮೆರಿಕಾದ ಅಧ್ಯಕ್ಷನಾಗುವ ಆಸೆಯೂ ಈತನಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.