ಮುಂಬಯಿ: ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ರಾಜ್ಕುಮಾರ್ ಬದೋಲೆ ಅವರ ಪುತ್ರಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಪರಿಶಿಷ್ಟ ಜಾತಿಯ ಸ್ಕಾಲರ್ಶಿಪ್ ದೊರೆತ ಹಿನ್ನಲೆಯಲ್ಲಿ ಭಾರೀ ವಿವಾದ ಉಂಟಾಗಿತ್ತು. ಇದೀಗ ಆಕೆಯೇ ಸ್ಕಾಲರ್ಶಿಪ್ನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾಳೆ.
ಐಐಟಿ ಮದ್ರಾಸ್ನಲ್ಲಿ ಶಿಕ್ಷಣ ಪೂರೈಸಿ, ಸುಸೆಕ್ಷ ಯೂನಿವರ್ಸಿಟಿಯಲ್ಲಿ ಎಂಎಸ್ಸಿ ಮಾಡಿರುವ ಶ್ರುತಿ ಬದೋಲೆಗೆ ವಿದೇಶದಲ್ಲಿ ಅಸ್ಟ್ರೋಫಿಸಿಕ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಲು ಸ್ಕಾಲರ್ಶಿಪ್ ದೊರೆತಿತ್ತು. ಇದಕ್ಕೆ ಟೀಕಾಕಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಶ್ರುತಿ, ‘ಸಂಪೂರ್ಣ ವಿದ್ಯಾಭ್ಯಾಸವನ್ನು ನಾನು ಮೆರಿಟ್ ಆಧಾರದಲ್ಲಿ ಪೂರೈಸಿದ್ದೇನೆ. ತಂದೆ ಸಚಿವರಾಗಿ ಇಲ್ಲದೇ ಇದ್ದ ವೇಳೆಯೂ ನನಗೆ ಸ್ಕಾಲರ್ಶಿಪ್ ದೊರೆತಿದೆ. ಈಗ ಅವರು ಸಚಿವರಾದ ತಕ್ಷಣಕ್ಕೆ ನಾನು ಮೆರಿಟ್ ಇಲ್ಲದ ವಿದ್ಯಾರ್ಥಿಯಾಗುವುದಿಲ್ಲ’ ಎಂದಿದ್ದಾಳೆ.
ಅಲ್ಲದೇ ವಿದೇಶದಲ್ಲಿ ವ್ಯಾಸಂಗ ಮಾಡಲು ಇರುವ ಪರಿಶಿಷ್ಟ ಜಾತಿ ಸ್ಕಾಲರ್ಶಿಪ್ಗೆ 26 ಟಾಪ್ ಯೂನಿವರ್ಸಿಟಿಗಳ ಪೈಕಿ ನಾನು ಆಯ್ಕೆಯಾಗಿದ್ದೇನೆ. ಈ ಸ್ಕಾಲರ್ಶಿಪ್ಗೆ ಕೇವಲ ಇಬ್ಬರು ಮಾತ್ರ ಅರ್ಜಿ ಹಾಕಿದ್ದರು. ಹೀಗಿರುವಾಗ ನಾನು ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡಿದ್ದೇನೆ ಎಂಬ ಪ್ರಶ್ನೆ ಹೇಗೆ ಉದ್ಭವವಾಗುತ್ತದೆ. ಅಲ್ಲದೇ ಈ ಸ್ಕಾಲರ್ಶಿಪ್ ಪಡೆಯಲು ಆದಾಯದ ಮಿತಿಯೂ ಇಲ್ಲ’ ಎಂದು ಹೇಳಿದ್ದಾಳೆ.
ಅಲ್ಲದೇ ಸ್ಕಾಲರ್ಶಿಪ್ ತೆಗೆದುಕೊಳ್ಳದಿರಲು ನಿರ್ಧರಿಸಿರುವುದಾಗಿ ಆಕೆ ಹೇಳಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.