ಬಾಗಲಕೋಟೆ : ಬಸವಣ್ಣನವರನ್ನು ಗುರುವೆಂದು, ವಚನಗಳನ್ನು ಧರ್ಮಗ್ರಂಥಗಳು ಎಂದು ಒಪ್ಪಿಕೊಂಡಲ್ಲಿ ಸಮನ್ವಯತೆ ಸಾಧ್ಯ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಶಿಕ್ಷಕ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಸವಣ್ಣ ಮತ್ತು ವಚನಗಳ ಒಪ್ಪಿಕೊಳ್ಳದವರೊಂದಿಗೆ ಸಮನ್ವಯತೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಶಿವಯೋಗ ಮಂದಿರದಲ್ಲಿ ಸೇರಿದವರೆಲ್ಲ ಮೊದಲು ಬಸವಣ್ಣ ಮತ್ತು ವಚನಗಳನ್ನು ಒಪ್ಪಿಕೊಳ್ಳಲಿ ಆ ಬಗ್ಗೆ ಮಾತನಾಡಲಿ ಎಂದು ಅವರು ಹೇಳಿದರು.
ಬಸವಣ್ಣನವ ವಚನಗಳ ನಾಮಾಂಕಿತವನ್ನೇ ತಿದ್ದಿದವರೊಂದಿಗೆ ಕೆಲ ಸ್ವಾಮೀಜಿಯವರು ಬೆನ್ನು ಹತ್ತಿರುವ ಬಗ್ಗೆ ರಂಭಾಪುರ ಶ್ರೀಗಳು ಆಡಿರುವ ಮಾತಿಗೆ ತಿರುಗೇಟು ನೀಡಿದ ನಿಜಗುಣಾನಂದ ಶ್ರೀಗಳು, ಬಸವಣ್ಣನವರನ್ನು ಗುರುವೆಂದು ಒಪ್ಪಿಕೊಳ್ಳದವರಿಗೆ ಬಸವಣ್ಣನವರ ಬಗೆಗಾಗಲಿ, ವಚನಗಳ ಬಗೆಗಾಗಲಿ, ಮಾತೆ ಮಹಾದೇವಿ ಅವರ ಬಗೆಗಾಗಲಿ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದರು.
ವಚನಗಳನ್ನು ಬರೆದವರು ದಲಿತರು, ಶೋಷಿತರು, ಸೂಳೆ ಸಂಕವ್ವನಂತವರು ಹಾಗೂ ಕೆಳವರ್ಗದ ಶರಣರು ಎಂದು ಅವರು ಲಿಂಗಾಯತ ಧರ್ಮ ಕೆಳವರ್ಗದವರ ಧರ್ಮವಾಗಿದೆ ಎಂದರು.
ವೀರಶೈವರು ಎನ್ನುವವರೆಲ್ಲ ಹಿಂದು ಧರ್ಮದವರು ಎಂದು ಘೋಷಿಸಿಕೊಳ್ಳಲಿ ಎಂದ ಅವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲಿದೆ. ಆ ನಿಟ್ಟಿನಲ್ಲಿ ನಡೆದಿರುವ ಹೋರಾಟ ಯಶಸ್ಸು ಕಾಣಲಿದೆ ಎಂದು ಹೇಳಿದರು.
ಲಿಂಗಾಯತ ಧರ್ಮ ಭಾರತದ ಶಕ್ತಿಯಾಗಿ ನಿಲ್ಲಲಿದೆ. ಈ ಬಗ್ಗೆ ಅನುಮಾನವೇ ಬೇಡ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.