ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್) ಮತ್ತು ದೇಶದ 5 ಐಐಟಿಗಳು ಸ್ಟೇಟ್ ಆಫ್ ಆರ್ಟ್ ರಿಸರ್ಚ್ ಪಾರ್ಕ್ ಸ್ಥಾಪನೆಗಾಗಿ ಕೇಂದ್ರದಿಂದ ಹಣಕಾಸು ನೆರವನ್ನು ಪಡೆದುಕೊಳ್ಳಲಿದೆ.
ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆಯವ್ಯಯ ಹಣಕಾಸು ಸಮಿತಿ ಈ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸುವ ಬಗೆಗಿನ ಮಾನವ ಸಂಪನ್ಮೂಲ ಸಚಿವಾಲಯದ ಪ್ರಸ್ತಾವಣೆಗೆ ಅನುಮೋದನೆ ನೀಡಿದೆ.
ಒಂದು ಐಐಎಸ್ ಮತ್ತು 5 ಐಐಟಿಗಳಲ್ಲಿ ಒಟ್ಟು 6 ಹೊಸ ರಿಸರ್ಚ್ ಪಾರ್ಕ್ ಸ್ಥಾಪನೆ ಮಾಡಲು ಸಚಿವಾಲಯ ಪ್ರಸ್ತಾವಣೆ ಸಲ್ಲಿಸಿತ್ತು.
ಐಐಟಿ-ದೆಹಲಿ, ಐಐಟಿ-ಹೈದರಾಬಾದ್, ಐಐಟಿ-ಗಾಂಧಿನಗರ, ಐಐಟಿ-ಕಾನ್ಪುರ, ಐಐಟಿ-ಗುವಾಹಟಿಗಳಲ್ಲಿ ಪಾರ್ಕ್ ಸ್ಥಾಪನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.