ಭೋಪಾಲ್: 400 ಮಕ್ಕಳ ಜೀವವನ್ನು ಉಳಿಸುವ ಸಲುವಾಗಿ 10 ಕೆಜಿ ತೂಕದ ಬಾಂಬ್ ಹಿಡಿದುಕೊಂಡು 1ಕಿಲೋಮೀಟರ್ವರೆಗೆ ಓಡಿದ ಪೊಲೀಸ್ ಕಾನ್ಸ್ಸ್ಟೇಬಲ್ ಅಭಿಷೇಕ್ ಪಟೇಲ್ರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ 50 ಸಾವಿರ ರೂಪಾಯಿ ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.
ಆ.25ರಂದು ಚಿತ್ತೋರ್ ಗ್ರಾಮದ ಶಾಲೆಯೊಂದರಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆಯನ್ನು ಸ್ವೀಕರಿಸಿದ ಪೊಲೀಸರು ಅಲ್ಲಿಗೆ ಧಾವಿಸಿದ್ದರು. ಈ ವೇಳೆ ಶಾಲೆಯಲ್ಲಿ 10 ಕೆಜಿ ತೂಕದ ಬಾಂಬ್ ಪತ್ತೆಯಾಗಿತ್ತು. ಇದನ್ನು ಏಕಾಂಗಿಯಾಗಿ ಎತ್ತಿ ಹೆಗಲ ಮೇಲಿಟ್ಟು ಕಾನ್ಸ್ಸ್ಟೇಬಲ್ ಅಭಿಷೇಕ್ ಓಡಲಾರಂಭಿಸಿದರು. ಶಾಲೆಯಿಂದ 1ಕಿಲೋಮೀಟರ್ ದೂರ ಓಡಿ ಅದನ್ನು ಎಸೆದರು.
ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಆಗಮಿಸುವಾಗ ತುಂಬಾ ತಡವಾಗಬಹುದು ಎಂಬುದನ್ನು ಅರಿತು, ಮಕ್ಕಳ ಪ್ರಾಣವನ್ನು ಅಪಾಯಕ್ಕಿಡು ಮಾಡುವುದು ಬೇಡ ಎಂದು ಅವರು ಈ ಕಾರ್ಯ ಮಾಡಿದ್ದಾರೆ. ಬಾಂಬ್ ನಿಷ್ಕ್ರೀಯ ದಳ ಬರುವಷ್ಟರಲ್ಲಿ ಅವರು ಬಾಂಬ್ನ್ನು ದೂರಕ್ಕೆ ಎಸೆದಾಗಿತ್ತು.
ನನ್ನೊಬ್ಬನ ಪ್ರಾಣ ಹೋದರೆ ಪರವಾಗಿಲ್ಲ 400 ಮಕ್ಕಳು ಉಳಿಯಬೇಕು ಎಂಬ ಕಾರಣಕ್ಕೆ ಅವರು ಈ ಸಾಹಸ ಮಾಡಿದ್ದಾರೆ. ಅವರ ಕಾರ್ಯಕ್ಕೆ ಎಲ್ಲಾ ಕಡೆಯಿಂದಲು ಶ್ಲಾಘನೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.