ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಆ.29ನ್ನು ದೇಶದಲ್ಲಿ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದ್ದಾರೆ.
‘ಅತ್ಯಂತ ಹುರುಪು ಮತ್ತು ಉತ್ಸಾಹದಿಂದ ಕ್ರೀಡೆಯನ್ನು ಉನ್ನತ ಮಟ್ಟಕ್ಕೇರಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಉತ್ಸಾಹಿಗಳಿಗೆ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ’ ಎಂದರು.
ಅಲ್ಲದೇ ‘ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವಾರ್ಪಣೆ. ಅವರ ಲೆಜೆಂಡರಿ ಕೌಶಲ್ಯಗಳು ಭಾರತದ ಹಾಕಿಗೆ ಅದ್ಭುತವನ್ನೇ ತಂದುಕೊಟ್ಟಿತ್ತು’ ಎಂದಿದ್ದಾರೆ.
ಧ್ಯಾನ್ ಚಂದ್ ಅವರು 1905ರ ಆ.29ರಂದು ಅಲಹಾಬಾದ್ನ ರಜಪೂತ ಸಮುದಾಯದಲ್ಲಿ ಜನಿಸಿದ್ದರು. ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಬಂಗಾರ ತಂದು ಕೊಟ್ಟ ಕೀರ್ತಿ ಇವರದ್ದು.
2012ರಲ್ಲಿ ಭಾರತ ಸರ್ಕಾರ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.