ನವದೆಹಲಿ: ಭಾರತದಲ್ಲಿ ಒಟ್ಟು 27,312 ಆನೆಗಳಿವೆ ಎಂದು ಮೊತ್ತ ಮೊದಲ ಸಿಂಕ್ರನೈಸ್ಟ್ ಆಲ್ ಇಂಡಿಯಾ ಎಲಿಫ್ಯಾಂಟ್ ಪಾಪ್ಯುಲೇಶನ್ ಎಸ್ಟಿಮೇಶನ್ನ ಪ್ರಾಥಮಿಕ ಫಲಿತಾಂಶದಿಂದ ತಿಳಿದು ಬಂದಿದೆ.
ಅರಣ್ಯ, ಪರಿಸರ ಆಗಸ್ಟ್ 12ರಂದು ನೀಡಿದ ವರದಿಯ ಪ್ರಕಾರ ಕರ್ನಾಟಕದಲ್ಲಿ 6049 ಆನೆಗಳಿದ್ದು, ಇದು ದೇಶದಲ್ಲೇ ಅತೀಹೆಚ್ಚು. ಎರಡನೇ ಸ್ಥಾನದಲ್ಲಿರುವ ಅಸ್ಸಾಂನಲ್ಲಿ 5,719 ಆನೆಗಳಿವೆ ಮತ್ತು ಕೇರಳದಲ್ಲಿ 3,045ಆನೆಗಳಿವೆ.
2012ರ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಆನೆಗಳ ಸಂಖ್ಯೆಯಲ್ಲಿ ಕುಂಠಿತವಾಗಿದೆ. ಈ ಸಮೀಕ್ಷೆಯಲ್ಲಿ ಆನೆಗಳ ಸಂಖ್ಯೆ 29,391ಆಗಿತ್ತು.
2012ರಲ್ಲಿ ವಿವಿಧ ರಾಜ್ಯಗಳು ವಿವಿಧ ವಿಧಾನಗಳಲ್ಲಿ ಸಮೀಕ್ಷೆಗಳನ್ನು ನಡೆಸಿದ ಹಿನ್ನಲೆಯಲ್ಲಿ ಫಲಿತಾಂಶಗಳಲ್ಲಿ ನ್ಯೂನ್ಯತೆಗಳು ಇದ್ದಿರಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಈ ಬಾರಿ ಇಡೀ ಭಾರತದಲ್ಲಿ ಆನೆಗಳ ಸಮೀಕ್ಷೆಗೆ ಒಂದೇ ವಿಧಾನವನ್ನು ಅನುಸರಿಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.