ನವದೆಹಲಿ: ರಕ್ಷಣಾ ಸಚಿವಾಲಯ ಬರೋಬ್ಬರಿ ಸಾವಿರ ಕೋಟಿ ರೂಪಾಯಿಯ ವೆಚ್ಚದಲ್ಲಿ ಸೇನೆಯ ಯುದ್ಧ ಟ್ಯಾಂಕರ್ಗಳನ್ನು ಮತ್ತು ಇನ್ಫ್ಯಾಂಟ್ರಿ ಕಂಬಾತ್ ವಾಹನಗಳ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗೆ ಅನುಮೋದನೆ ನೀಡಿದೆ.
1,500 ರಷ್ಯಾ ಮೂಲದ ಬಿಎಂಪಿ-2/2ಕೆ ಇನ್ಫ್ಯಾಂಟ್ರಿ ಕಂಬಾತ್ ವಾಹನ, 3000 ಟಿ-90/ಟಿ-27 ಟಾಪ್ ಎಂಡ್ ಮಿಸೈಲ್, ಎಲ್-20 ಏರ್ ಡಿಫೆನ್ಸ್ ಗನ್ಸ್ಗೆ ಲಕ್ಷ ರೌಂಡ್ಸ್ ಶಸ್ತ್ರಾಸ್ತ್ರಗಳಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.
ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಕೊರತೆಯಿದೆ ಎಂಬ ಬಗ್ಗೆ ಇತ್ತೀಚಿನ ವರದಿ ತಿಳಿಸಿತ್ತು. ಇನ್ನೊಂದೆಡೆ ಚೀನಾ ಮತ್ತು ಪಾಕ್ ನಡುವಣ ಸಂಬಂಧ ಹಳಸಿದ್ದು, ಯಾವಾಗ ಬೇಕಾದರೂ ಯುದ್ಧದ ವಾತಾವರಣ ಸೃಷ್ಟಿಯಾಬಹುದು ಎಂಬ ಆತಂಕವಿದೆ. ಈ ಹಿನ್ನಲೆಯಲ್ಲಿ ಸೇನೆಯನ್ನು ಬಲಿಷ್ಠಗೊಳಿಸಲು ಕೇಂದ್ರ ಮುಂದಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.