ನವದೆಹಲಿ: ನೆರೆಯ ದೇಶದ ಒಳನುಸುಳುವಿಕೆಯ ಪ್ರಯತ್ನವನ್ನು ಹತ್ತಿಕ್ಕುವ ಸಲುವಾಗಿ ಭಾರತ-ಪಾಕಿಸ್ಥಾನದ ಗಡಿಯ ಸುತ್ತಲೂ ದಿನದ 24 ಗಂಟೆಯೂ ಸೆನ್ಸರ್ ಒಳಗೊಂಡ ವಾಸ್ತವ ಬೇಲಿ ಹಾಕಲು ಸರ್ಕಾರ ಯೋಜಿಸಿದೆ.
ಗೃಹಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ಅವರು ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
‘ವಿವಿಧ ತರದ ಸೆನ್ಸರ್, ರ್ಯಾಡರ್, ಡೇ ಆಂಡ್ ನೈಟ್ ವಿಶನ್ ಕ್ಯಾಮರಾಗಳನ್ನು ಒಳಗೊಂಡ ಸಮಗ್ರ ಏಕೀಕೃತ ಗಡಿ ನಿರ್ವಹಣಾ ಪರಿಹಾರ (Comprehensive Integrated Border Management Solution ) ನಿಯೋಜನೆಯ ಪರೀಕ್ಷಾರ್ಥ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದಿದ್ದಾರೆ.
ಜಮ್ಮು ಸೆಕ್ಟರ್ನ 5ರಿಂದ 6 ಕಿಮೀವರೆಗೆ ಪರೀಕ್ಷಾರ್ಥವಾಗಿ ಇದನ್ನು ಅಳವಡಿಸಲಾಗಿದ್ದು, ಯಶಸ್ವಿಯಾದರೆ ಅದನ್ನು ವಿಸ್ತರಿಸುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.