ಜೈಸಲ್ಮೇರ್: ಬರ್ಮೇರನ್ನು ಬಯಲು ಶೌಚಮುಕ್ತಗೊಳಿಸಲು ಪಣತೊಟ್ಟಿರುವ ಅಲ್ಲಿನ ಜಿಲ್ಲಾಧಿಕಾರಿ ನೂತನ ಅಭಿಯಾನನವೊಂದನ್ನು ಆರಂಭಿಸಿದ್ದಾರೆ. ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಅದನ್ನು ಯಾರೂ ನಿತ್ಯ ಸಮರ್ಪಕವಾಗಿ ಬಳಸುತ್ತಾರೋ ಅವರಿಗೆ ತನ್ನೊಂದಿಗೆ ಕೂತು ಕಾಫಿ ಕುಡಿಯುವ ಅವಕಾಶವನ್ನು ಅವರು ನೀಡಲಿದ್ದಾರೆ.
ಡಿಸೆಂಬರ್ 17ರೊಳಗೆ ಬರ್ಮೇರನ್ನು ಬಯಲು ಶೌಚಮುಕ್ತಗೊಳಿಸುವ ಟಾರ್ಗೆಟ್ ಇಟ್ಟುಕೊಂಡಿರುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ಶಿವಪ್ರಸಾದ್ ನಕಟೆ ಹೇಳಿದ್ದಾರೆ.
ಬರ್ಮೇರ್ನಲ್ಲಿ ಒಟ್ಟು 489 ಗ್ರಾಂ ಪಂಚಾಯತ್ಗಳಿದ್ದು, ಇದುವರೆಗೆ ಕೇವಲ 173 ಬಯಲುಶೌಚ ಮುಕ್ತಗೊಂಡಿದೆ. ಉಳಿದವುಗಳನ್ನು ಈ ವರ್ಷದ ಅಂತ್ಯದೊಳಗೆ ಬಯಲು ಶೌಚಮುಕ್ತಗೊಳಿಸುವ ಗುರಿ ಜಿಲ್ಲಾಧಿಕಾರಿಯದ್ದು.
ಅದಕ್ಕಾಗಿ ಶೌಚಾಲಯ ನಿರ್ಮಿಸುವ ಗ್ರಾಮಸ್ಥರಿಗೆ ತನ್ನೊಂದಿಗೆ ಕಾಫಿ ಕುಡಿಯುವ ಆಫರನ್ನು ಅವರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.