ಮುಂಬಯಿ : ಬ್ಯಾಂಕ್ಗಳಲ್ಲಿ ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಕಾರ್ಯತತ್ಪರರಾಗಿ ಎಂದು ಆರ್ಬಿಐ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ಗ್ರಾಹಕರ ಅನುಕೂಲಕ್ಕಾಗಿ ಹಾಗೂ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳು ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಜಾರಿಗೆ ತರಲು ಶೀಘ್ರವೇ ಕಾರ್ಯತತ್ಪರರಾಗಬೇಕು ಎಂದು ಆರ್ಬಿಐನ ಉಪ ಗವರ್ನರ್ ಎಸ್. ಎಸ್. ಮುಂಡ್ರಾ ಅವರು ಎಲ್ಲಾ ಬ್ಯಾಂಕ್ಗಳಿಗೆ ಸೂಚಿಸಿದ್ದಾರೆ.
ಮೊಬೈಲ್ ಪೋರ್ಟಬಿಲಿಟಿ ರೀತಿಯಲ್ಲೇ ಅಕೌಂಟ್ ನಂಬರ್ ಪೋರ್ಟಬಿಲಿಟಿಯೂ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.
ಕೆಲವು ಬ್ಯಾಂಕ್ಗಳ ಸೇವೆಗಳ ಬಗ್ಗೆ ತೃಪ್ತಿ ಇಲ್ಲದಿದ್ದರೆ, ಅಥವಾ ಬೇರೊಂದು ಊರಿಗೆ ವರ್ಗಾವಣೆಗೊಂಡರೆ ಅಂತಹ ಸಮಯದಲ್ಲಿ ತಮ್ಮ ಖಾತೆಯನ್ನು ಬೇರೆ ಬ್ಯಾಂಕ್ಗಳಿಗೆ ವರ್ಗಾಯಿಸಿಕೊಳ್ಳಬಹುದು. ಇದರಿಂದಾಗಿ ಗ್ರಾಹಕರಿಗೂ ಅನುಕೂಲ ಅಂತೆಯೇ ಬ್ಯಾಂಕ್ಗಳಿಗೂ. ಏಕೆಂದರೆ ಕೆಲವರು ಹೊಸ ಖಾತೆ ತೆರೆದಾಗ ಹಳೆ ಖಾತೆಯನ್ನು ಮುಚ್ಚದೆ ಹಾಗೆ ಬಿಡುತ್ತಿದ್ದಾರೆ. ಇದರಿಂದ ಖಾತೆಗಳ ಸಂಖ್ಯೆ ಬೆಳೆಯುತ್ತಿದೆ. ಇನ್ನು ಪೋರ್ಟಬಿಲಿಟಿಯಿಂದಾಗಿ ಒಬ್ಬನೇ ವ್ಯಕ್ತಿ ಹಲವು ಖಾತೆಗಳನ್ನು ಹೊಂದಿ ಅವುಗಳನ್ನು ನಿಭಾಯಿಸುವ ಸಂಕಷ್ಟದಿಂದಲೂ ಪಾರಾಗಬಹುದು.
ಆದರೆ ಇದರ ಅನುಷ್ಠಾನ ಎಷ್ಟರ ಮಟ್ಟಿಗೆ ಸುಲಲಿತವಾಗಿ ನಡೆಯಬಹುದು ಎಂದು ಹಲವಾರು ಪ್ರಶ್ನೆಗಳಿವೆ. ಏಕೆಂದರೆ ಒಂದೊಂದು ಬ್ಯಾಂಕ್ ಕೈವಿಸಿ ವಿವರಗಳ ವಿಷಯದಲ್ಲಿ ಒಂದೊಂದು ವಿಧಾನ ಅನುಸರಿಸುತ್ತಿವೆ. ಅಕೌಂಟ್ ನಂಬರ್ ವಿಧಾನವನ್ನೂ ಬ್ಯಾಂಕ್ಗಳು ಬದಲಾಯಿಸಬೇಕಾಗಬಹುದು. ಅದಕ್ಕೆ ತಕ್ಕಂತೆ ಸಾಫ್ಟ್ವೇರ್ಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಹೀಗಾಗಿ ಅಕೌಂಟ್ ನಂಬರ್ ಪೋರ್ಟಬಿಲಿಟಿ ಸುಲಲಿತವಾಗಿ ಪ್ರಾರಂಭವಾಗಲು ಕೆಲ ಸಮಯ ಬೇಕಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.