ನವದೆಹಲಿ: ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿಯ ಸಹಿವುಳ್ಳ ಪ್ರತಿಭಟನಾ ಕ್ಯಾಲೆಂಡರ್ನ್ನು ಎನ್ಐಎ ವಶಪಡಿಸಿಕೊಂಡಿದೆ. ಗಿಲಾನಿ ಅಳಿಯ ಮನೆಯಲ್ಲಿ ಈ ಕ್ಯಾಲೆಂಡರ್ ಇತ್ತು ಎನ್ನಲಾಗಿದೆ.
ಈ ಕ್ಯಾಲೆಂಡರ್ನಲ್ಲಿ 2016 ಆಗಸ್ಟ್ ಚಟುವಟಿಕೆಗಳ ಬಗ್ಗೆ ವಿವರ ಇತ್ತು. ಹಿಜ್ಬುಲ್ ಮುಜಾಹಿದ್ದೀನ್ ನಾಯಕ ಬುರ್ಹ್ವಾನ್ ವಾಣಿ ಜುಲೈ 8ರಂದು ಹತ್ಯೆಯಾದ ನಂತರದ ತಿಂಗಳುಗಳ ಪ್ರತಿಭಟನೆಗಳ ರೂಪವನ್ನು ಇದರಲ್ಲಿ ಉಲ್ಲೇಖಿಸಲಾಗಿತ್ತು.
ಹುರಿಯತ್ನ ಈ ಯೋಜನಾಬದ್ಧ ಪ್ರತಿಭಟನೆ, ಹಿಂಸಾಚಾರದಿಂದಾಗಿ ಹಲವಾರು ಮಂದಿ ಹತ್ಯೆಯಾಗಿದ್ದರು.
ಕ್ಯಾಲೆಂಡರ್ ಪ್ರಕಾರ ಆಗಸ್ಟ್ 6ರಂದು ಒಟ್ಟು ಸೇರಿ ಸ್ಥಳಿಯ ಚೌಕಗಳನ್ನು ಮುತ್ತಿಗೆ ಹಾಕುವಂತೆ ಕರೆ ನೀಡಲಾಗಿತ್ತು.
ಆ.8ರಂದು ರಸ್ತೆ ತಡೆಗೆ ಆಗ್ರಹಿಸಲಾಗಿತ್ತು, ಆ.9ರಂದು ಮಹಿಳಾ ಪ್ರತಿಭಟನೆ ಈ ರೀತಿ ಒಂದೊಂದು ದಿನ ಒಂದೊಂದು ಸ್ವರೂಪದ ಪ್ರತಿಭಟನೆ ನಡೆಸುವಂತೆ ಕರೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.