ನವದೆಹಲಿ: ನೂತನವಾಗಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯಡಿ ನೋಂದಣಿಗೆ ಅರ್ಜಿ ಸಲ್ಲಿಸಲಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಗುಜರಾತ್, ಉತ್ತರಪ್ರದೇಶ ರಾಜ್ಯಗಳು ಪಡೆದುಕೊಂಡಿವೆ.
ಜಿಎಸ್ಟಿ ನೆಟ್ವರ್ಕ್ ಹೊಸ ನೋಂದಣಿಗಾಗಿ ಇದುವರೆಗೆ ಸುಮಾರು 10 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ 1,32,448 ಅರ್ಜಿಗಳು ಮಹಾರಾಷ್ಟ್ರದಿಂದ, 90 ಸಾವಿರ ಅರ್ಜಿಗಳು ಗುಜರಾತ್ನಿಂದ 87 ಸಾವಿರ ಅರ್ಜಿಗಳು ಉತ್ತರಪ್ರದೇಶದಿಂದ ಬಂದಿವೆ.
ಪಶ್ಚಿಮಬಂಗಾಳ ಮತ್ತು ತಮಿಳುನಾಡಿನಿಂದ ಒಟ್ಟು 75,000 ಅರ್ಜಿಗಳು ಬಂದಿವೆ.
‘ಇದುವರೆಗೆ 10 ಲಕ್ಷ ಅರ್ಜಿಗಳು ಬಂದಿದ್ದು, ಇದುವರೆಗೆ 40-45 ಸಾವಿರ ಅರ್ಜಿಗಳನ್ನು ಪ್ರತಿನಿತ್ಯ ಸ್ವೀಕರಿಸಲಾಗುತ್ತಿದೆ’ ಎಂದು ಜಿಎಸ್ಟಿಎನ್ ಮುಖ್ಯಸ್ಥ ನವೀನ್ ಕುಮಾರ್ ಹಿಂದೂಸ್ಥಾನ್ ಟೈಮ್ಸ್ಗೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.