ಅಮೇಥಿ: ದೇಶದಾದ್ಯಂತ ಸ್ವಚ್ಛತೆಯ ಅರಿವು ಜನರಲ್ಲಿ ದಟ್ಟವಾಗಿದೆ. ಮನೆಗೊಂದು ಶೌಚಾಲಯ ಗೌರವದ ಪ್ರತೀಕ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗೀ ಈ ಬಾರಿಯ ರಕ್ಷಾಬಂಧನದಂದು ಕೆಲ ಸಹೋದರರು ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಇದಕ್ಕಿಂತ ಒಳ್ಳೆಯ ಉಡುಗೊರೆ ಹೆಣ್ಣುಮಕ್ಕಳಿಗೆ ಬೇರೆ ಏನು ಇರಲು ಸಾಧ್ಯ ಅಲ್ಲವೇ?
ಉತ್ತರಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಸಹೋದರರು ಈ ಬಾರಿಯ ರಕ್ಷಾಬಂಧನಕ್ಕೆ ಸಹೋದರಿಯರಿಗೆ ವಿಭಿನ್ನ ಉಡುಗೊರೆ ನೀಡಲು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಬಯಲು ಶೌಚಮುಕ್ತ ಅಭಿಯಾನವನ್ನು ಯಶಸ್ವಿಗೊಳಿಸಲು ಅಲ್ಲಿನ ಜಿಲ್ಲಾ ಸ್ವಚ್ಛತಾ ಸಮಿತಿ ‘ಅನೋಕಿ ಅಮೇಥಿ ಕಾ ಅನೋಕ ಭಾಯ್’(ಅಮೂಲ್ಯ ಅಮೇಥಿಯ ಅಮೂಲ್ಯ ಸಹೋದರ) ಎಂಬ ಅಭಿಯಾನವನ್ನು ಆರಂಭಿಸಿದೆ.
ಈಗಾಗಲೇ 850 ಮಂದಿ ಸಹೋದರರು ಈ ಅಭಿಯಾನದಲ್ಲಿ ಹೆಸರು ನೊಂದಾಯಿಸಿ ತಮ್ಮ ಸಹೋದರಿಯರಿಗೆ ರಾಖಿ ಹಬ್ಬದಂದು ಶೌಚಾಲಯವನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಸಹೋದರತೆಯನ್ನು ಸಾರುವ ರಕ್ಷಾ ಬಂಧನವೂ ಸ್ವಚ್ಛತಾ ಅಭಿಯಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.