ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತೀಯ ಸೇನೆ, ನೌಕೆ ಮತ್ತು ವಾಯುಸೇನೆಗೆ ಗಣನೀಯ ಆರ್ಥಿಕ ಅಧಿಕಾರವನ್ನು ನೀಡಿ, ದೇಶದ ಸೂಕ್ಷ್ಮ ಮಿಲಿಟರಿ ನೆಲೆಗಳಲ್ಲಿನ ಭದ್ರತೆಯನ್ನು ಬಲಿಷ್ಠಗೊಳಿಸಲು ಮುಂದಾಗಿದೆ.
ಅತೀ ಸೂಕ್ಷ್ಮ ರಕ್ಷಣಾ ಆಸ್ತಿಗಳಿಗೆ ಸಂಪೂರ್ಣ ಭದ್ರತೆಯನ್ನು ನೀಡುವ ಸಲುವಾಗಿ ಆದ್ಯತೆಯ ಮೇರೆಗೆ ಕಾರ್ಯವನ್ನು ನಿರ್ವಹಿಸುವಂತೆ ಮತ್ತು ನಿಗದಿತ ಸಮಯದೊಳಗೆ ಕಾರ್ಯ ಪೂರ್ಣಗೊಳಿಸುವಂತೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಡೆಡ್ಲೈನ್ ನೀಡಿದ್ದಾರೆ.
ಸೂಕ್ಷ್ಮ ಪ್ರದೇಶಗಳ ಭದ್ರತೆ ಹೆಚ್ಚಿಸುವ ಕಾರ್ಯಕ್ಕೆ ಮೂರು ಪಡೆಗಳ ಮುಖ್ಯಸ್ಥರು ವರ್ಷಕ್ಕೆ 800 ಕೋಟಿಯನ್ನು ವ್ಯಯ ಮಾಡಬಹುದಾಗಿದೆ.
ಅಲ್ಲದೇ ರಕ್ಷಣಾ ಸಚಿವಾಲಯದ ಅನುಮತಿಯಿಲ್ಲದೆ ಆರ್ಡರ್ ನೀಡುವ, ಪರಿಕರ ಸಂಗ್ರಹಿಸುವ, ನಾಗರಿಕ ಕಾರ್ಯ ಮಾಡುವ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಈ ಮೂರು ಪಡೆಗಳ ಮುಖ್ಯಸ್ಥರಿಗೆ ನೀಡಲಾಗಿದೆ.
ದೇಶದಲ್ಲಿ ಒಟ್ಟು ೩೦೦ ಸೂಕ್ಷ್ಮ ಮಿಲಿಟರಿ ನೆಲೆಗಳಿವೆ. ಇದರಲ್ಲಿ ೬೦೦ ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.