ನವದೆಹಲಿ: ಕಳೆದ ಹಣಕಾಸು ವರ್ಷದಲ್ಲ್ಲಿ ಶಿಕ್ಷಣ, ಸ್ವಚ್ಛಭಾರತ, ಕೃಷಿ ಕಲ್ಯಾಣ ಸೇರಿದಂತೆ ಸೆಸ್ ಹೋಸ್ಟ್ ಮೂಲಕ ಮತ್ತು ಇತರ ಸರ್ಚಾರ್ಜ್ಗಳ ಮೂಲಕ ಸರ್ಕಾರ ಒಟ್ಟು 2,35,307.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.
ವಿತ್ತ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಲೋಕಸಭೆಗೆ ಈ ಬಗ್ಗೆ ಶುಕ್ರವಾರ ಲಿಖಿತ ಮಾಹಿತಿಯನ್ನು ನೀಡಿದ್ದಾರೆ.
2016-17ರಲ್ಲಿ ಶಿಕ್ಷಣ, ಸ್ವಚ್ಛಭಾರತ, ಕೃಷಿ ಕಲ್ಯಾಣ, ಇತರ ಸೆಸ್ ಹಾಗೂ ಸರ್ಚಾರ್ಜ್ಗಳ ಮೂಲಕ ನೇರ ತೆರಿಗೆಯಡಿ ಒಟ್ಟು 46,939.17 ಕೋಟಿ ಸಂಗ್ರಹಿಸಲಾಗಿದೆ ಎಂದಿದ್ದಾರೆ.
ಅಫೋರ್ಸೆಡ್ ಸೆಸ್ ಮತ್ತು ಸರ್ಚಾರ್ಜ್ಗಳ ಕಳೆದ ಹಣಕಾಸು ವರ್ಷದಲ್ಲಿ ಮೂಲಕ ರೂ.1,88,368.58 ಗಳಿಸಲಾಗಿದೆ ಎಂದರು.
2015-16ರ ಬಜೆಟ್ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ವಚ್ಛಭಾರತದ ಸೆಸ್ನ್ನು ಶೇ.2ರಷ್ಟು ವಿಧಿಸಲು ಪ್ರಸ್ತಾಪಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.