ನವದೆಹಲಿ: ಬಿಹಾರ ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಮಹತ್ವದ ವಿಶ್ವಾಸಮತಯಾಚನೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ನಿರೀಕ್ಷೆಯಂತೆಯೇ ಬಹುಮತ ಸಾಬೀತುಪಡಿಸಿದೆ.
ಬಿಹಾರದ ವಿಧಾನಸಭೆ 234 ಸದಸ್ಯರನ್ನು ಒಳಗೊಂಡಿದ್ದು, ಸರ್ಕಾರ ರಚನೆಗೆ ಒಟ್ಟು 122 ಮತಗಳ ಅವಶ್ಯಕತೆ ಇದೆ. ಜೆಡಿಯು-ಬಿಜೆಪಿ ಮೈತ್ರಿಗಳು ಒಟ್ಟು 131 ಮತಗಳ ಸರಳ ಬಹುಮತವನ್ನು ಹೊಂದಿದೆ.
ಆರ್ಜೆಡಿ-ಕಾಂಗ್ರೆಸ್ ಒಟ್ಟು 108ಸ್ಥಾನಗಳನ್ನು ಹೊಂದಿವೆ. ಸಿಪಿಐ 3 ಸ್ಥಾನ ಹೊಂದಿದೆ.
ಕಾಂಗ್ರೆಸ್, ಆರ್ಜೆಡಿಯ ಮಹಾಘಟಬಂಧನಕ್ಕೆ ತಿಲಾಂಜಲಿ ಇತ್ತು ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.