ಮುಂಬೈ: ಸಾಲಮನ್ನಾಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಮೊಬೈಲ್ ಆ್ಯಪ್ನ್ನು ಶೀಘ್ರವೇ ಹೊರತರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ದಾರೆ.
ಈ ಮೊಬೈಲ್ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಸಾಲಮನ್ನಾಗೆ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್ ಮೂಲಕವೇ ಅರ್ಜಿ ಭರ್ತಿ ಮಾಡಿ ಕಳುಹಿಸಿಕೊಡಬಹುದು.
ಅಷ್ಟೇ ಅಲ್ಲದೇ ಅರ್ಜಿ ಭರ್ತಿ ಮಾಡಲು ಸಹಾಯಕವಾಗುವಂತೆ 26000 ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.
‘ಛತ್ರಪತಿ ಶಿವಾಜಿ ಮಹರಾಜ್ ಸನ್ಮಾನ್ ಯೋಜನಾ’ ಹೆಸರಲ್ಲಿ ಸಾಲಮನ್ನಾ ಯೋಜನೆ ಆರಂಭಿಸಲಾಗಿದ್ದು, ಈ ಹಿಂದೆ 2012 ಮತ್ತು 2016ರೊಳಗೆ ಸಾಲ ಪಡೆದ ರೈತರಿಗೆ ಮಾತ್ರ ಇದರ ಲಾಭ ಪಡೆಯಬಹುದಾಗಿತ್ತು. ಆದರೀಗ ಅದನ್ನು ವಿಸ್ತರಿಸಲಾಗಿದ್ದು, 2008ರಲ್ಲಿ ಸಾಲ ಪಡೆದವರ ಸಾಲವೂ ಮನ್ನಾ ಆಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.