ಅಮರಾವತಿ: ಭಾರತದ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಗ್ರೂಪ್-1 ಸರ್ವಿಸ್ ಪೋಸ್ಟ್ ಡೆಪ್ಯೂಟಿ ಕಲೆಕ್ಟರ್ ಆಗಿ ಗುರುವಾರ ನೇಮಕ ಮಾಡಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಖುದ್ದು ಸರ್ಕಾರಿ ಆದೇಶಪತ್ರವನ್ನು ಸಿಂಧು ಅವರ ಹಸ್ತಾಂತರಿಸಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಸಿಂಧು ಅವರಿಗೆ ಆಂಧ್ರ ಸರ್ಕಾರ 3 ಕೋಟಿ ರೂಪಾಯಿಗಳನ್ನು ನೀಡಿತ್ತು, ಅಲ್ಲದೇ ಅಮರಾವತಿಯಲ್ಲಿ ನಿವಾಸವೊಂದನ್ನು ನೀಡಿದೆ. ಅಲ್ಲದೇ ಗ್ರೂಪ್-1 ಸರ್ವಿಸ್ ಜಾಬ್ ನೀಡುವ ಭರವಸೆ ನೀಡಿತ್ತು. ಇದಕ್ಕಾಗಿ ಪಬ್ಲಿಕ್ ಸರ್ವಿಸ್ ನೇಮಕಾತಿ ಕಾಯ್ದೆಗೆಯೇ ತಿದ್ದುಪಡಿಯನ್ನು ತಂದಿತ್ತು.
ತನ್ನನ್ನು ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಿಸಿದ್ದಕ್ಕಾಗಿ ಸಿಂಧು ಸಂತಸ ವ್ಯಕ್ತಪಡಿಸಿದ್ದು, ಮೊದಲ ಆದ್ಯತೆ ಏನಿದ್ದರೂ ಬ್ಯಾಡ್ಮಿಂಟನ್ಗೆ ನೀಡುವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.