ನವದೆಹಲಿ: ಮೂರು ತಿಂಗಳ ಸಂಸ್ಕೃತ ಕೋರ್ಸುಗಳನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ದೆಹಲಿ ಸಂಸ್ಕೃತಿ ಅಕಾಡಮಿ ರಾಜಧಾನಿಯಲ್ಲಿ ಒಟ್ಟು 75 ಸೆಂಟರ್ಗಳನ್ನು ಸ್ಥಾಪಿಸಲಿದ್ದು, ಇಲ್ಲಿ ಕೋರ್ಸುಗಳನ್ನು ನೀಡಲಾಗುತ್ತದೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 3 ತಿಂಗಳ ಸಂಸ್ಕೃತ ಕೋರ್ಸುಗಳನ್ನು ಆರಂಭಿಸುವ ಘೋಷಣೆ ಮಾಡಿದ್ದು, ಸಂಸ್ಕೃತ ಕೇವಲ ಭಾಷೆಯಲ್ಲಿ ಅದೊಂದು ಜೀವಿತ. ಇಂದಿಗೂ ಪ್ರಸ್ತುತವಾಗಿದೆ ಎಂದಿದ್ದಾರೆ.
ದೈನಂದಿನ ಜೀವನದಲ್ಲಿ ಜನರು ಸಂಸ್ಕೃತವನ್ನು ಅಧ್ಯಯನ ಮತ್ತು ಅರ್ಥ ಮಾಡಿಕೊಳ್ಳಬಹುದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗೆ ಬಳಸಿಕೊಳ್ಳಬಹುದು. ಇದು ಸಾಮಾನ್ಯ ಜನರಿಗಾಗಿರುವ 3 ತಿಂಗಳ ಕೋರ್ಸು ಎಂದಿದ್ದಾರೆ.
ಹಲವರು ಕವಿತೆಗಳಿಗಾಗಿ ಉರ್ದು ಕಲಿಯುತ್ತಾರೆ, ಹಲವರು ಕೆಲಸಕ್ಕಾಗಿ ಇಂಗ್ಲೀಷ್ ಕಲಿಯುತ್ತಾರೆ. ಹಾಗೆಯೇ ಧಾರ್ಮಿಕ ಸಮಾರಂಭಕ್ಕಾಗಿ ಸಂಸ್ಕೃತ ಕಲಿಸಲಾಗುತ್ತಿದೆ. ಸಂಸ್ಕೃತ ನಮ್ಮ ದೈನಂದಿನ ಜೀವನದಲ್ಲಿರುತ್ತದೆ ಆದರೆ ಅದರ ಅರಿವು ನಮಗಿರುವುದಿಲ್ಲ ಅಷ್ಟೇ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.