ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಗುರುವಾರ ಸನ್ಮಾನಿಸಿದರು.
ನಿನ್ನೆಯಷ್ಟೇ ಮಹಿಳಾ ತಂಡದ ಸದಸ್ಯೆಯರು ಮುಂಬಯಿ ಏರ್ಪೋರ್ಟ್ಗೆ ಬಂದಿಳಿದಿದ್ದು, ಅವರಿಗೆ ಅಭೂತಪೂರ್ವ ಸ್ವಾಗತವನ್ನು ಕೋರಲಾಗಿತ್ತು.
ಇದು ಕ್ರೀಡಾ ಸಚಿವಾಲಯ ಅದ್ಧೂರಿ ಕಾರ್ಯಕ್ರಮವನ್ನು ಏರ್ಪಡಿಸಿ ಅವರನ್ನು ಸನ್ಮಾನಿಸಿದೆ. ಸಮಾರಂಭದ ವೀಡಿಯೋವನ್ನು ಗೋಯಲ್ ಟ್ವಿಟರ್ನಲ್ಲಿ ಹಾಕಿದ್ದಾರೆ.
ಟ್ವಿಟ್ ಮಾಡಿರುವ ಅವರು, ‘ಮಹಿಳಾ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿದೆ, ಯಾವುದೇ ಶ್ಲಾಘನೆಯೂ ಅವರಿಗೆ ಕಡಿಮೆ. ರನ್ನರ್ ಅಪ್ ಆದರೂ ಫೈನಲ್ ಗೆದ್ದ ಭಾವನೆ ನನಗಾಗುತ್ತಿದೆ. ಯಾಕೆಂದರೆ ಅವರು ಕೋಟ್ಯಾಂತರ ಜನರ ಹೃದಯ ಗೆದ್ದಿದ್ದಾರೆ’ ಎಂದಿದ್ದಾರೆ.
It was great meeting & interacting with Warriors of Indian Women’s Cricket Team who won the hearts of 1.25 billion Indians & inspired youth. pic.twitter.com/vxZ5DKKEAe
— Vijay Goel (@VijayGoelBJP) July 27, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.