ನವದೆಹಲಿ: ದೂರದರ್ಶನದ ಐಕಾನಿಕ್ ಲೋಗೋವನ್ನು ಬದಲಾಯಿಸಲು ಪ್ರಸಾರಭಾರತಿ ಚಿಂತನೆ ನಡೆಸಿದೆ. ಇದಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸ, ಸಲಹೆಗಳನ್ನು ನೀಡುವಂತೆ ಕೇಳಿದೆ.
1959 ರಿಂದ ದೂರದರ್ಶನ ಒಂದೇ ಲೋಗೋವನ್ನು ಹೊಂದಿದ್ದು, ಇದೀಗ ಅದನ್ನು ಬದಲಾಯಿಸಿ ಹೊಸ, ಯುವ ಪೀಳಿಗೆಗೆ ಹೊಂದಿಕೆಯಾಗುವ, ಚಾನೆಲ್ನ ಲುಕ್ ಬದಲಾಯಿಸುವ ವಿನ್ಯಾಸವನ್ನು ತರಲು ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಸಾರ ಭಾರತಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಿ ಶೇಖರ್ ವಂಪತಿ, ‘ನಮ್ಮ ಅಧಿಕ ಜನಸಂಖ್ಯೆ 30 ವರ್ಷಕ್ಕಿಂತ ಕೆಳಗಿದೆ. ಇವರೆಲ್ಲಾ ಉದಾರೀಕರಣ ಮಕ್ಕಳು, ದೂರದರ್ಶನದೊಂದಿಗೆ ಬೆಳೆದವರಲ್ಲ. ಹಿಂದಿನ ತಲೆಮಾರು ರೂಪಿಸಿದ ವಿನ್ಯಾಸಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ’ ಎಂದಿದ್ದಾರೆ.
ಪ್ರಸಾರ ಭಾರತಿ ಹೊಸ ಲೋಗೋ ವಿನ್ಯಾಸ ಮಾಡಿಕೊಡುವವರಿಗೆ 1 ಲಕ್ಷ ನಗದು ಬಹುಮಾನವನ್ನು ನೀಡಲಿದೆ. ಲೋಗೋ ವಿನ್ಯಾಸಗಳನ್ನು ಸಲ್ಲಿಸಲು ಆಗಸ್ಟ್ 13 ಕೊನೆಯ ದಿನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.