ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 304 ಬಹಿರಂಗಪಡಿಸಲಾದ ದಾಖಲೆಗಳನ್ನು ನ್ಯಾಷನಲ್ ಆರ್ಚಿವ್ಸ್ ಆಫ್ ಇಂಡಿಯಾಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಈ ದಾಖಲೆಗಳನ್ನು ಸರ್ಕಾರದ ನಾಲ್ಕು ಇಲಾಖೆಗಳಿಂದ ಸ್ವೀಕರಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಸಚಿವಾಲಯ 58 ದಾಖಲೆಗಳನ್ನು, ವಿದೇಶಾಂಗ ಸಚಿವಾಲಯ 200 ದಾಖಲೆಗಳನ್ನು, ಗೃಹ ಸಚಿವಾಲಯ 37 ದಾಖಲೆಗಳನ್ನು, ಸಂಪುಟ ಕಾರ್ಯದರ್ಶಿಗಳು 9 ದಾಖಲೆಗಳನ್ನು ನ್ಯಾಷನಲ್ ಆರ್ಚಿವ್ಸ್ಗೆ ಕಳುಹಿಸಿಕೊಟ್ಟಿದ್ದಾರೆ ಎಂದಿದ್ದಾರೆ.
ಈ 304 ದಾಖಲೆಗಳ ಪೈಕಿ 303 ದಾಖಲೆಗಳನ್ನು ಈಗಾಗಲೇ www.netajipaper.gov.in ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.