ನವದೆಹಲಿ: ಇನ್ನು ಮುಂದೆ ಪರಿಶೀಲನೆ ಮತ್ತು ವಿವಿಧ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಎಲ್ಲಾ ಕಡೆ ಆಧಾರ್ ಕಾರ್ಡ್ನ್ನು ಕೊಂಡೊಯ್ಯಬೇಕಾಗಿಲ್ಲ. ಮೊಬೈಲ್ ಮೂಲಕ ಆಧಾರ್ ಕಾರ್ಡ್ ಹೊತ್ತೊಯ್ಯುವ ಸೌಲಭ್ಯವೊಂದನ್ನು ಯುಐಡಿಐಎ ಹೊರ ತಂದಿದೆ.
ಯುಐಡಿಎಐ ಮೊಬೈಲ್ ಬಳಕೆದಾರರಿಗಾಗಿ mAadhaar ಎಂಬ ಆಪ್ನ್ನು ಹೊರ ತಂದಿದ್ದು, ಸ್ಮಾರ್ಟ್ ಫೋನ್ಗಳ ಮುಖೇನ ಆಧಾರ್ ನಂಬರ್ ಪ್ರೊಫೈಲ್ನ್ನು ಮೊಬೈಲ್ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಬೇಕಾದ ಕಡೆ ಮೊಬೈಲ್ ಮೂಲಕವೇ ಆಧಾರ್ ಸಂಖ್ಯೆಯನ್ನು ತೋರಿಸಬಹುದಾಗಿದೆ. ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಕೊಂಡೊಯ್ಯುವ ಅವಶ್ಯಕತೆ ಇಲ್ಲ.
ಆಧಾರ್ ಡಿಮೋಗ್ರಾಫಿಕ್ ಮಾಹಿತಿಗಳಾದ, ಆಧಾರ್ ಸಂಖ್ಯೆಗೆ ಲಿಂಕ್ ಆದ ಹೆಸರು, ಜನನ ದಿನಾಂಕ, ಲಿಂಗ, ವಿಳಾಸ ಮತ್ತು ಫೋಟೋಗ್ರಾಫ್ಗಳು ಸ್ಮಾರ್ಟ್ಫೋನ್ನಲ್ಲಿ ಲಭ್ಯವಾಗಲಿದೆ.
ಗೂಗಲ್ ಪ್ಲೇ ಮೂಲಕ ಈ ಆಪ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಸದ್ಯ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಈಒಎಸ್ ಬಳಕೆದಾರರಿಗೂ ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.