ಶ್ರೀನಗರ : ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಬುಧವಾರ ಮಹತ್ವದ ಜಿಎಸ್ಟಿ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ.
ಜಿಎಸ್ಟಿ ಚರ್ಚೆಗೆಂದು ಕರೆಯಲಾಗಿದ್ದ 4 ದಿನಗಳ ವಿಶೇಷ ಅಧಿವೇಶನದಲ್ಲಿ ಗಲಾಟೆ, ಗದ್ದಲಗಳ ನಡುವೆಯೂ ಜಿಎಸ್ಟಿಗೆ ಅನುಮೋದನೆ ಸಿಕ್ಕಿದೆ.
ಇದು ಅಲ್ಲಿನ ಜನತೆಗೆ ಸಿಕ್ಕ ಜಯ ಎಂದು ಸರ್ಕಾರ ವಿಶ್ಲೇಷಿಸಿದೆ.
ದೇಶದ ಇತರ ಭಾಗಗಳಲ್ಲಿ ಜುಲೈ 1 ರಿಂದ ಜಿಎಸ್ಟಿ ಜಾರಿಯಾಗಿದೆ. ಆದರೆ ಸಂವಿಧಾನದ 370 ನೇ ಕಲಂ ಅಡಿ ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಕಾಶ್ಮೀರದಲ್ಲಿ ಇದು ಜಾರಿಗೆ ಬಂದಿರಲಿಲ್ಲ.
ಇದೀಗ ಅಲ್ಲಿನ ಆಡಳಿತಾರೂಢ ಪಿಡಿಪಿ ಮತ್ತು ಬಿಜೆಪಿ ಅಸೆಂಬ್ಲಿಯಲ್ಲಿ ಜಿಎಸ್ಟಿ ಮಸೂದೆ ಅಂಗೀಕಾರ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಅಲ್ಲಿನ ವ್ಯಾಪಾರ ಸಮುದಾಯ ಮತ್ತು ಕೈಗಾರಿಕೆಗಳಿಗೆ ಸಂತೋಷ ಮೂಡಿಸಿದೆ.
ಅನುಮೋದನೆಗೊಂಡ ಪ್ರಸ್ತಾವನೆಯನ್ನು ಸಂಪುಟವು ರಾಜ್ಯಪಾಲರಿಗೆ ಕಳುಹಿಸಲಿದ್ದು, ಅವರ ಅಂಕಿತದ ಬಳಿಕ ಜಿಎಸ್ಟಿಯು ಅಲ್ಲಿ ಜಾರಿಗೆ ಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.