ನವದೆಹಲಿ: ನಾಗರಿಕ ಸಮಾಜದ ಸಹಕಾರದೊಂದಿಗೆ ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ದೇಶದ 20 ರಾಜ್ಯಗಳ ಸುಮಾರು 55 ಸಾವಿರ ಶಾಲೆಗಳಲ್ಲಿ ತಂತ್ರಜ್ಞಾನಗಳನ್ನು ಒದಗಿಸಲು ಮುಂದಾಗಿದೆ.
ಡಿಜಿಟಲ್ ಕ್ಲಾಸ್ರೂಮ್ಗಳ ಮೂಲಕ ಶಾಲೆಗಳಿಗೆ ತಾಂತ್ರಿಕ ತಿಳುವಳಿಕೆಗಳನ್ನು ಈ ಜಂಟಿ ಯೋಜನೆ ಒದಗಿಸಲಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರನ್ನೂ ಈ ಯೋಜನೆ ಕೇಂದ್ರೀಕರಿಸಲಿದ್ದು, ಇವುಗಳು ಶಾಲೆಗಳ ಲಭ್ಯತೆ, ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲಿದೆ.
ತಂತ್ರಜ್ಞಾನ ಆಧಾರಿತ ಅಧ್ಯಯನ, ಕೌಶಲ್ಯಾಭಿವೃದ್ಧಿಗೆ ಪೂರಕವಾದ ಅತ್ಯಾಧುನಿಕ ಡಿಜಿಟಲ್ ಕ್ಯಾಂಪಸ್ನ್ನು ಇದು ನೀಡಲಿದೆ.
ದೇಶದ 2 ಕೋಟಿ ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.