ನವದೆಹಲಿ: ಇದುವರೆಗೆ ಜಿಎಸ್ಟಿಗೆ 2 ಲಕ್ಷ ಹೊಸ ನೋಂದಣಿಗಳಾಗಿದ್ದು, ಇದರಲ್ಲಿ 39 ಸಾವಿರ ನೋಂದಣಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರೆವೆನ್ಯೂ ಸೆಕ್ರೆಟರಿ ಹಸ್ಮುಖ್ ಅಧಿಯ ಹೇಳಿದ್ದಾರೆ.
ಜಿಎಸ್ಟಿ ಜಾರಿ ಬಳಿಕ ಯಾವುದೇ ತೊಂದರೆಗಳಾಗಬಾರದು ಎಂಬ ಕಾರಣಕ್ಕೆ ಎಲ್ಲಾ ದರ ಮತ್ತು ಆಹಾರ ಪೂರೈಕೆಗಳನ್ನು ಅದರಲ್ಲೂ ಮುಖ್ಯವಾಗಿ ಅಗತ್ಯ ಮತ್ತು ದಿನಬಳಕೆ ವಸ್ತುಗಳನ್ನು ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತದೆ ಎಂದಿದ್ದಾರೆ.
ಸಣ್ಣ ವ್ಯಾಪಾರಿಗಳು ಬಿಲ್ಗಳನ್ನು ನೀಡುವ ಅಗತ್ಯವಿಲ್ಲ, ಅವರು ಸಂಯೋಜಿತ ಯೋಜನೆಯಡಿ ಬರುವುದರಿಂದ ಫಿಕ್ಸ್ಡ್ ಟ್ಯಾಕ್ಸ್ ಪಾವತಿಸಬೇಕು ಅಷ್ಟೇ. 75 ಲಕ್ಷಕ್ಕೂ ಅಧಿಕ ವಹಿವಾಟು ಇರುವ ದೊಡ್ಡ ವ್ಯಾಪಾರಿಗಳು ಬಿಲ್ ನೀಡುವುದು ಕಟ್ಟಾಯ. ಆದರೆ ಕಂಪ್ಯೂಟರ್ ಉತ್ಪಾದಿತ ರಿಸಿಪ್ಟ್ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
3 ತಿಂಗಳ ಅವಧಿಗೆ ಉತ್ಪನ್ನಗಳ ಮೇಲೆ ಪರಿಷ್ಕೃತ ದರದ ಸ್ಟಿಕರ್ ಹಾಕುವ ಅವಕಾಶನ್ನು ಕಂಪನಿಗಳಿಗೆ ನೀಡಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.