ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 6 ರಿಂದ 8 ರ ವರೆಗೆ ಜರ್ಮನಿಯ ಹ್ಯಾಂಬರ್ಗ್ಗೆ ಭೇಟಿ ನೀಡಲಿದ್ದು, 12 ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜುಲೈ 4 ರಿಂದ 6 ರ ವರೆಗೆ ಇಸ್ರೇಲ್ಗೆ ಭೇಟಿ ನೀಡಿದ ನಂತರ ಜುಲೈ 6ರ ಸಂಜೆ ಜರ್ಮನಿ ಆತಿಥ್ಯ ವಹಿಸಿರುವ 12 ನೇ ಜಿ-20 ಶೃಂಗದಲ್ಲಿ ಭಾಗಿಯಾಗಲು ಹ್ಯಾಂಬರ್ಗ್ಗೆ ತೆರಳಲಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಮಾಹಿತಿ ನೀಡಿರುವ ಮೋದಿ ಈ ರೀತಿ ಹೇಳಿದ್ದಾರೆ.
“ಎರಡು ದಿನಗಳ ಕಾಲ, ಜುಲೈ 7 ಮತ್ತು 8 ರಂದು, ಜಿ-20 ರಾಷ್ಟ್ರಗಳ ನಾಯಕರೊಂದಿಗೆ ಜಗತ್ತಿನ ಆರ್ಥಿಕ ಪ್ರಗತಿ, ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿ ಹಾಗೂ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತಿರುವ ಪ್ರಮುಖ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದೇವೆ.
ಕಳೆದ ವರ್ಷ ಹ್ಯಾಂಗ್ ಝೌನಲ್ಲಿ ನಡೆದ ಶೃಂಗದಿಂದ ಇಂದಿನವರೆಗಿನ ಪ್ರಗತಿ ಮತ್ತು ಭಯೋತ್ಪಾದನೆ, ಹವಾಮಾನ, ಸುಸ್ಥಿರ ಅಭಿವೃದ್ಧಿ, ಪ್ರಗತಿ ಮತ್ತು ವಾಣಿಜ್ಯ, ಡಿಜಿಟಲೀಕರಣ, ಆರೋಗ್ಯ, ಉದ್ಯೋಗ, ವಲಸೆ, ಮಹಿಳಾ ಸಬಲೀಕರಣ ಮತ್ತು ಆಫ್ರಿಕಾದೊಂದಿಗಿನ ಪಾಲುದಾರಿಕೆ ಕುರಿತು ನಡೆದಿದ್ದ ಚಿಂತನೆಗಳನ್ನು ಎಲ್ಲರೊಂದಿಗೆ ಪರಾಮರ್ಶಿಸಲಿದ್ದೇವೆ. ಈ ವರ್ಷ ಆಯ್ಕೆ ಮಾಡಲಾಗಿರುವ ಧ್ಯೇಯ ವಾಕ್ಯ ‘ಅಂತರ್ ಸಂಪರ್ಕಿತ ವಿಶ್ವವನ್ನು ರೂಪುಗೊಳಿಸುವುದು’ ಎಂಬುದಾಗಿದೆ.
ಹಿಂದಿನಂತೆ, ಶೃಂಗಸಭೆಯ ವೇಳೆ ನಾಯಕರುಗಳನ್ನು ಭೇಟಿ ಮಾಡಿ, ಪರಸ್ಪರ ಹಿತಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ಮಾತುಕತೆ ನಡೆಸಲು ಮತ್ತು ಅಭಿಪ್ರಾಯ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ.”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.