ಬೆಂಗಳೂರು : ರಾಜ್ಯದಲ್ಲಿ ಅತ್ಯುತ್ತಮ ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವ ಸಲುವಾಗಿ ಎಲಿವೇಟ್ 100 ಎಂಬ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಅಂತರ್ಜಾಲ ತಾಣಕ್ಕೆ ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಚಾಲನೆ ನೀಡಿದರು.
ಇಂದು ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಎಲಿವೇಟ್ 100 ಸ್ಟಾರ್ಟ್ಅಪ್ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಂತರ್ಜಾಲ ತಾಣಕ್ಕೆ – https://goo.gl/6KtKmG ಚಾಲನೆ ನೀಡಿದರು.
ಸೀಡ್ ಫಂಡಿಂಗ್, ಸಾಹಸೋದ್ಯಮ ಬಂಡವಾಳ, ಮಾರ್ಗದರ್ಶನ ಮತ್ತು ನೆಟ್ವರ್ಕಿಂಗ್ – ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಾಗಲಿದೆ. ಸುಮಾರು 400 ಕೋಟಿ ರೂ. ಬಂಡವಾಳ, ಕಲ್ಪನೆಗಳನ್ನು ಸಾಕಾರಗೊಳಿಸುವಿಕೆ, ಕಾರ್ಯಾಗಾರ ಮತ್ತು ಬೆಂಬಲವನ್ನು ಎಲಿವೇಟ್ ಯೋಜನೆಯಡಿ ನೀಡಲಾಗುವುದು.
ಮಂಗಳೂರು, ಕಲ್ಬುರ್ಗಿ, ಮೈಸೂರು, ಹುಬ್ಬಳ್ಳಿಗಳಲ್ಲಿ ಎಲಿವೇಟ್ ಯೋಜನೆಯಡಿ ಸ್ಟಾರ್ಟ್ಅಪ್ಗಳನ್ನು ಪ್ರಾರಂಭಿಸಲು ತಂಡಗಳನ್ನು ಆಯ್ಕೆ ಮಾಡಲಾಗುವುದು.
ರಾಜ್ಯ ಸರ್ಕಾರವು ಈ ಯೋಜನೆಯನ್ನು ಘೋಷಿಸುತ್ತಿರುವುದಕ್ಕೆ ಸಂತೋಷವಾಗಿದೆ. ಈ ಯೋಜನೆಯು ಕರ್ನಾಟಕದಲ್ಲಿ ವ್ಯಾಪಾರ-ವಹಿವಾಟವನ್ನು ಹೆಚ್ಚಿಸಿ ರಾಜ್ಯದ ಅಭಿವೃದ್ಧಿಗೆ ಸಾಕಾರವಾಗಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಟಾರ್ಟ್ಅಪ್ಗಳಿಗೆ ಸಮಗ್ರ ಬೆಂಬಲವನ್ನು ನಾವು ನೀಡುತ್ತೇವೆ. ತಂತ್ರಜ್ಞಾನವನ್ನು ಬಳಸುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯಕವಾಗಲಿದೆ. ಆಗಸ್ಟ್ 29 ಮತ್ತು 30 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿ ಅಂತಿಮ 100 ಸ್ಟಾರ್ಟ್ಅಪ್ಗಳನ್ನು ಗುರುತಿಸುತ್ತೇವೆ ಎಂದು ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ದೇಶಪಾಂಡೆ ಫೌಂಡೇಶನ್, TiEBangalore ಮತ್ತಿನ್ನಿತರ ಸಂಸ್ಥೆಗಳು ರಾಜ್ಯಾದ್ಯಂತ ಸ್ಟಾರ್ಟ್ಅಪ್ಗೆ ಕೈ ಜೋಡಿಸಲಿವೆ.
ರಾಜ್ಯದಲ್ಲಿ ಇದುವರೆಗೆ 46 ಸ್ಟಾರ್ಟ್ಅಪ್ಗಳನ್ನು ಗುರುತಿಸಲಾಗಿದ್ದು 15.68 ಕೋಟಿ ರೂ. ನೀಡಲಾಗಿದೆ. ಅದರಲ್ಲಿ ಬಯೋಟೆಕ್ 16, ಪ್ರವಾಸೋದ್ಯಮ 8 ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ 12 ಸ್ಟಾರ್ಟ್ಅಪ್ಗಳಿವೆ.
ಸ್ಟಾರ್ಟ್ಅಪ್ಗೆ ಕುರಿತಂತೆ ಅರ್ಜಿಗಳನ್ನು – https://goo.gl/6KtKmG ಜುಲೈ 4 ರಿಂದ ಜುಲೈ 18 ರವರೆಗೆ ಸಲ್ಲಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.