ನವದೆಹಲಿ: ಬದಲಾವಣೆಗೆ ಒಗ್ಗಿಕೊಳ್ಳದ ಮನಸ್ಥಿತಿಯಿಂದ ಹೊರಬಂದು, ನವ ಭಾರತದ ಸ್ಫೂರ್ತಿಯೊಂದಿಗೆ ಭಾರತೀಯ ಆಡಳಿತ ವ್ಯವಸ್ಥೆಯನ್ನು ತುಂಬುವಂತೆ ಪ್ರಧಾನಿ ನರೇಂದ್ರ ಮೋದಿ ಯುವ ಐಎಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಸೋಮವಾರ ಉಪ ಕಾರ್ಯದರ್ಶಿಗಳ ಉದ್ಘಾಟನಾ ಸಮಾವೇಶದಲ್ಲಿ 2015ರ ಬ್ಯಾಚ್ನ ಐಎಎಸದ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಎಷ್ಟು ಪ್ರಗತಿ ಹೊಂದಬೇಕಿತ್ತೋ ಅಷ್ಟನ್ನು ಭಾರತ ಹೊಂದಿಲ್ಲ. ಭಾರತದ ಬಳಿಕ ಸ್ವಾತಂತ್ರ್ಯಗೊಂಡ ರಾಷ್ಟ್ರಗಳು ನಮಗಿಂತಲೂ ಹೆಚ್ಚಿನ ಸಂಪನ್ಮೂಲ ಕೊರತೆ ಹೊಂದಿದ್ದವು. ಬದಲಾವಣೆ ತರಲು ಧೈರ್ಯ ಬೇಕು, ವ್ಯವಸ್ಥೆಯನ್ನು ಸುಧಾರಿಸಲು ಸಕ್ರಿಯ ಬದಲಾವಣೆ ಅಗತ್ಯ’ ಎಂದರು.
ಅಲ್ಲದೇ ಕೇಂದ್ರದ ಅತೀ ಹಿರಿಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸುವಂತೆ ಅವರು ಯುವ ಅಧಿಕಾರಿಗಳಿಗೆ ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.