ಜೈಪುರ: ಜಿಎಸ್ಟಿ ಜಾರಿಯಾದ ಜೂನ್ 30-ಜುಲೈ1ರ ಮಧ್ಯರಾತ್ರಿ ಜನಿಸಿದ ರಾಜಸ್ಥಾನದ ಮಗುವೊಂದಕ್ಕೆ ‘ಜಿಎಸ್ಟಿ’ ಎಂದು ನಾಮಕರಣ ಮಾಡಲಾಗಿದೆ.
ಈ ಗಂಡು ಮಗು ಬೇವಾದಲ್ಲಿ ಮಧ್ಯರಾತ್ರಿ 12.02ಕ್ಕೆ ಜನನವಾಯಿತು. ಅದರ ತಾಯಿ ಅದಕ್ಕೆ ಜಿಎಸ್ಟಿ ಎಂದು ಹೆಸರಿಡಲು ನಿರ್ಧರಿಸಿದ್ದಾಳೆ.
ಈ ಬಗ್ಗೆ ಟ್ವಿಟ್ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ‘ಆರೋಗ್ಯವಾಗಿ ಸುಧೀರ್ಘವಾಗಿ ಬದುಕು ಜಿಎಸ್ಟಿ’ ಎಂದು ಶುಭಕೋರಿದ್ದಾರೆ.
ಜೂನ್ 30-ಜುಲೈ1ರ ಮಧ್ಯರಾತ್ರಿ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಜಿಎಸ್ಟಿಗೆ ಚಾಲನೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.