ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿದರು.
‘ಪ್ರೆಸಿಡೆಂಟ್ ಪ್ರಣಬ್ ಮುಖರ್ಜಿ-ಎ ಸ್ಟೇಟ್ಸ್ಮನ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಮೋದಿ, ಪ್ರಣವ್ ಅವರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಪಡೆದದ್ದು ನನಗೆ ಹೆಮ್ಮೆ ತಂದಿದೆ ಎಂದರು.
ಭಾಷಣದ ವೇಳೆ ಭಾವುಕರಾದ ಮೋದಿ, ರಾಷ್ಟ್ರಪತಿ ಸ್ಥಾನ ಶಿಷ್ಟಾಚಾರಕ್ಕಿಂತ ಹೆಚ್ಚಿನದ್ದು, ಈ ಪುಸ್ತಕದಲ್ಲಿನ ಫೋಟೋಗಳಿಂದ ನಾವು ನಮ್ಮ ರಾಷ್ಟ್ರಪತಿಗಳ ಬಗೆಗಿನ ಮಾನವೀಯ ಗುಣವನ್ನು ನೋಡಬಹುದು, ಇದು ನಮಗೆ ಹೆಮ್ಮೆ ಪಡುವಂತೆ ಮಾಡುತ್ತದೆ ಎಂದರು.
ಆಡಳಿತಾವಧಿಯಲ್ಲಿ ಪ್ರಣಬ್ ತಂದೆಯ ಸ್ಥಾನದಲ್ಲಿ ನಿಂತು ನನಗೆ ಮಾರ್ಗದರ್ಶನ ನೀಡಿದ್ದಾರೆ. ಅವರು ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು..
ಮುಖರ್ಜಿ ಅವರ ಅಧಿಕಾರವಧಿ ಜುಲೈ12ಕ್ಕೆ ಅಂತ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.