ನವದೆಹಲಿ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ದೋಷದಂತಹ ಮಾರಕ ಕಾಯಿಲೆಗಳು ಏರಿಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಸಬ್ಸಿಡಿ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿದೆ.
ದೇಶದಾದ್ಯಂತ ಈ ಸೌಲಭ್ಯಗಳನ್ನು ಜಾರಿಗೊಳಿಸುವ ಚಿಂತನೆ ಇದೆ. ನೀತಿ ಆಯೋಗ ಈ ಬಗ್ಗೆ ಕರಡನ್ನು ರಚಿಸಿದ್ದು, ಇದರ ಪ್ರತಿಯನ್ನು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪ್ರತಿಕ್ರಿಯೆ ಪಡೆಯುವ ಸಲುವಾಗಿ ಕಳುಹಿಸಿಕೊಡಲಾಗಿದೆ.
300 ಬೆಡ್ಗಳುಳ್ಳ ಸರ್ಕಾರಿ ಆಸ್ಪತ್ರೆಗಳಲ್ಲಿ ೫೦ ಬೆಡ್ಗಳನ್ನು ಖಾಸಗಿಯವರಿಗೆ ನೀಡುವ ಯೋಜನೆ ಇದರಲ್ಲಿದೆ. ಖಾಸಗಿಯವರು ವೈದ್ಯರನ್ನು, ಸ್ಟಾಫ್ಗಳನ್ನು, ಪರಿಕರಗಳನ್ನು ನೀಡಲಿದ್ದು ಇದಕ್ಕಾಗಿ ೩೦ ವರ್ಷಗಳ ಲೀಸ್ಗೆ ರಾಜ್ಯಗಳು ಸಹಿ ಹಾಕಬೇಕಿದೆ.
ಬಹುತೇಕ ರೋಗಿಗಳಿಗೆ ಚಿಕಿತ್ಸೆ ಉಚಿತವಾಗಲಿದೆ ಆದರೆ ಕೆಲವೊಂದು ಪೇಯ್ಡ್ ವಾರ್ಡ್ಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.