ನವದೆಹಲಿ: ಮಹತ್ವದ ಸರಕು ಮತ್ತು ಸೇವಾ ತೆರಿಗೆಯನ್ನು ಮಧ್ಯರಾತ್ರಿ ವಿಶೇಷ ಸಂಸತ್ತು ಅಧಿವೇಶನವನ್ನು ಏರ್ಪಡಿಸಿ ಜಾರಿಗೊಳಿಸಲಾಯಿತು. ಕಾಯ್ದೆಯೊಂದನ್ನು ಜಾರಿಗೊಳಿಸಲು ಮಧ್ಯರಾತ್ರಿ ಅಧಿವೇಶನ ಏರ್ಪಟ್ಟಿದ್ದು ಇತಿಹಾಸದಲ್ಲಿ ಇದೇ ಮೊದಲು. ಆದರೆ ಹಲವಾರು ಮಹತ್ವದ ಕ್ಷಣಗಳಲ್ಲಿ ಮಧ್ಯರಾತ್ರಿ ಅಧಿವೇಶನ ಈ ಹಿಂದೆಯೂ ಏರ್ಪಟ್ಟಿದೆ.
ಮೊದಲ ಬಾರಿಗೆ 1947ರ ಆಗಸ್ಟ್ 14-15ರ ಮಧ್ಯರಾತ್ರಿ ಭಾರತದ ಸ್ವಾತಂತ್ರ್ಯವನ್ನು ಘೋಷಿಸಲು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಅಧಿವೇಶನ ನಡೆಯಿತು. 11ಗಂಟೆಯಿಂದ ಮಧ್ಯರಾತ್ರಿ ಕಳೆಯುವರೆಗೂ ಇದು ಜರಗಿತ್ತು.
1972ರ ಆಗಸ್ಟ್ 14-15ರ ಮಧ್ಯರಾತ್ರಿ ಭಾರತ ಸ್ವಾತಂತ್ರ್ಯದ ರಜತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಮಧ್ಯರಾತ್ರಿ ಅಧಿವೇಶನ ಏರ್ಪಟ್ಟಿತ್ತು.
1992ರ ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳುವಳಿಯ 50ನೇ ವರ್ಷಾಚರಣೆಯ ಪ್ರಯುಕ್ತ ಮಧ್ಯರಾತ್ರಿ ಅಧಿವೇಶನ ಏರ್ಪಟ್ಟಿತ್ತು.
1997ರ ಆಗಸ್ಟ್ 14-15ರ ಮಧ್ಯರಾತ್ರಿ ಭಾರತ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ ಮಧ್ಯರಾತ್ರಿ ಅಧಿವೇಶನ ಏರ್ಪಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.