ಮುಂಬಯಿ: ಇಲ್ಲಿನ ಪ್ರಸಿದ್ಧ ರೈಲ್ವೇ ನಿಲ್ದಾಣ ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್ಟಿ)ನ ಹೆಸರನ್ನು ರೈಲ್ವೇ ಮಂಡಳಿಯು ಅಧಿಕೃತವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಬದಲಾಯಿಸಿದೆ. ಆದರೆ ಸ್ಟೇಶನ್ನ ಕೋಡ್ ನೇಮ್ ಸಿಎಸ್ಟಿಎಂನಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದು ಮುಂಬಯಿಯ ಅತೀ ದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, ಇದರ ಹೆಸರು ಬದಲಾವಣೆಯ ಆದೇಶವನ್ನು ಸೆಂಟ್ರಲ್ ರೈಲ್ವೇ ವಾಣಿಜ್ಯ ಇಲಾಖೆ ಹೊರಡಿಸಿತ್ತು, ಅಲ್ಲದೇ ಸಂಬಂಧಿತ ಇಲಾಖೆಗಳಿಗೆ ಸ್ಟೇಶನ್ ಹೆಸರಿನಲ್ಲಿ ಅಗತ್ಯ ಬದಲಾವಣೆ ತರುವಂತೆ ಸೂಚಿಸಿತ್ತು.
ಕಳೆದ ತಿಂಗಳು ಕೇಂದ್ರ ಸರ್ಕಾರ ಹೆಸರು ಬದಲಾವಣೆಯ ಶಿಫಾರಸ್ಸಿಗೆ ಸಮ್ಮತಿ ನೀಡಿತ್ತು.
ಮರಾಠ ರಾಜ ಶಿವಾಜಿಗೆ ಗೌರವದ ದ್ಯೋತಕವಾದ ಮಹಾರಾಜ್ ಹೆಸರನ್ನು ಸೇರಿಸುವಂತೆ ಶಿವಸೇನೆ ಒತ್ತಾಯ ಮಾಡುತ್ತಲೇ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.