ನವದೆಹಲಿ: ಅಮೆರಿಕಾದ ಟೆಕ್ಸಾಸ್ನಲ್ಲಿ ನಡೆದ ಗ್ಲೋಬಲ್ ಏರೋಸ್ಪೇಸ್ ಸ್ಪರ್ಧೆ ಕ್ಯಾನ್ಸ್ಯಾಟ್ನಲ್ಲಿ ಉತ್ತರಾಖಂಡದ ಪೆಟ್ರೋಲಿಯಂ ಮತ್ತು ಎನರ್ಜಿ ಸ್ಟಡೀಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾಗಿದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಟೀಂ ಅಸ್ಟ್ರಲ್ 2013ರಿಂದ ಕ್ಯಾನ್ಸ್ಯಾಟ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಸ್ಪರ್ಧೆಯಲ್ಲಿ 39 ತಂಡಗಳನ್ನು ಹಿಂದಿಕ್ಕಿ ವಿಶ್ವ ನಂ.೧ ಸ್ಥಾನವನ್ನು ಅಲಂಕರಿಸಿದೆ.
23 ಸದಸ್ಯರ ಈ ತಂಡದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಮೆಟಿರಿಯಲ್ ಸೈನ್ಸ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಎಂಜಿನಿಯರಿಂಗ್, ಡಿಸೈನ್ ಸ್ಟಡೀಸ್ ವಿದ್ಯಾರ್ಥಿಗಳಿದ್ದರು.
ಈ ಕ್ಯಾನ್ಸ್ಯಾಟ್ ಗ್ಲೋಬಲ್ ಏರೋಸ್ಪೇಸ್ ಸ್ಪರ್ಧೆಯನ್ನು ಅಮೆರಿಕನ್ ಅಸ್ಟ್ರೋನ್ಯಾಟಿಕಲ್ ಸೊಸೈಟಿ, ಅಮೆರಿಕನ್ ಇನ್ಸ್ಟ್ಯೂಟ್ ಆಫ್ ಏರೋನ್ಯಾಟಿಕ್ಸ್ ಮತ್ತು ಅಸ್ಟ್ರೋನ್ಯಾಟಿಕ್ಸ್ ಆಯೋಜನೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.