ವಾಷಿಂಗ್ಟನ್ : ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ನನ್ನು ಜಾಗತಿಕ ಉಗ್ರನೆಂದು ಅಮೆರಿಕಾ ಘೋಷಿಸಿದೆ. ಈ ಮೂಲಕ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿದಂತಾಗಿದೆ.
ಪಾಕಿಸ್ಥಾನ ಪ್ರಾಯೋಜಿತ ಜಮ್ಮು ಮತ್ತು ಕಾಶ್ಮೀರ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ನನ್ನು ಜಾಗತಿಕ ಉಗ್ರ ಎಂದು ಅಮೇರಿಕಾ ಘೋಷಣೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೂ ಮುನ್ನ ಅಮೇರಿಕಾ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಸಿಕ್ಕ ಜಯವಾಗಿದೆ. ಇದರಿಂದಾಗಿ ಪಾಕಿಸ್ಥಾನ ಉಗ್ರ ಸಂಘಟನೆಗಳಿಗೆ ಪರೋಕ್ಷ ನೆರವು ನೀಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಇದೀಗ ಈತನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವುದರ ಮೂಲಕ ಆತನಿಗೆ ಪಾಕಿಸ್ಥಾನ ಅಥವಾ ಯಾವುದೇ ವ್ಯಕ್ತಿಗಳು ನೆರವು ನೀಡುವಂತಿಲ್ಲ. ಒಂದೊಮ್ಮೆ ನೀಡಿದರೆ ಅದು ಅಪರಾಧವಾಗಲಿದೆ. ಇನ್ನು ಅಮೇರಿಕಾದಲ್ಲಿ ಸೈಯ್ಯದ್ ಸಲಾಹುದ್ದೀನ್ಗೆ ಸಂಬಂಧಿಸಿದ ಯಾವುದಾದರೂ ಆಸ್ತಿಯಿದ್ದಲ್ಲಿ ಅದನ್ನು ಅಮೇರಿಕಾ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ.
ಪಾಕಿಸ್ಥಾನ ಪ್ರಾಯೋಜಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಹುದ್ದೀನ್ ಎರಡು ದಶಕಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಕೃತ್ಯಗಳಲ್ಲಿ ಇವನದ್ದೇ ಪ್ರಮುಖ ಕೈವಾಡವಿತ್ತು ಎಂದು ದಾಖಲೆಗಳು ಸ್ಪಷ್ಟಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.