ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉನ್ನತ ಜಾಗತಿಕ ಕಂಪನಿಗಳ ಸಿಇಓಗಳೊಂದಿಗೆ ರೌಂಡ್ ಟೇಬಲ್ ಕಾನ್ಫರೆನ್ಸ್ ನಡೆಸಿದ್ದು, ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ.
ಭಾರತ ಈಗ ವ್ಯವಹಾರ ಸ್ನೇಹಿ ರಾಷ್ಟ್ರವಾಗುತ್ತಿದೆ. ಮುಂದಿನ ತಿಂಗಳಿನಿಂದ ಜಿಎಸ್ಟಿ ಜಾರಿಯಾಗುತ್ತಿರುವುದರಿಂದ ಮತ್ತಷ್ಟು ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಭಾರತವನ್ನೂ ಅಮೆರಿಕಾದಂತೆ ಉತ್ತಮವಾಗಿ ನಿರ್ಮಿಸಲು ಸಹಾಯ ಮಾಡಿ, ಭಾರತದಲ್ಲಿ ಹೂಡಿಕೆ ಮಾಡಿ ಎಂದು ಅವರು ಸಿಇಓಗಳಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ ಕಳೆದ ಮೂರು ವರ್ಷಗಳಲ್ಲಿ ಎನ್ಡಿಎ ಸರ್ಕಾರ ತೆಗೆದುಕೊಂಡ ಪಾಲಿಸಿಗಳಿಂದಾಗಿ ವಿದೆಶಿ ನೇರ ಬಂಡವಾಳವನ್ನು ಭಾರತ ಆಕರ್ಷಿಸುತ್ತಿದೆ ಎಂದರು.
ಸಭೆ ಬಳಿಕ ಟ್ವಿಟ್ ಮಾಡಿರುವ ಮೋದಿ, ‘ಸಿಇಓಗಳೊಂದಿಗೆ ಸಂವಾದ ನಡೆಸಿದೆ. ಭಾರತದಲ್ಲಿನ ಅವಕಾಶಗಳ ಬಗ್ಗೆ ಚರ್ಚಿಸಿದೆವು’ ಎಂದಿದ್ದಾರೆ.
ಸುಮಾರು 90 ನಿಮಿಷಗಳ ಕಾಲ ಸಭೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.