ಶ್ರೀನಗರ: ಪೊಲೀಸ್ ಅಧಿಕಾರಿವೊಬ್ಬರನ್ನು ಕರ್ತವ್ಯದ ವೇಳೆಯೇ ಉದ್ರಿಕ್ತರ ಗುಂಪು ಕಲ್ಲು ಹೊಡೆದು ಅತ್ಯಂತ ಹೀನ ರೀತಿಯಲ್ಲಿ ಕೊಲೆ ಮಾಡಿದ ಘಟನೆ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ನಡೆದಿದೆ.
ಪೊಲೀಸ್ ಉಪ ಅಧೀಕ್ಷಕ ಮೊಹಮ್ಮದ್ ಅಯೂಬ್ ಪಂಡಿತ್ ಎಂಬುವವರೇ ಜಾಮೀಯಾ ಮಸೀದಿ ಹೊರಭಾಗದಲ್ಲಿ ಉದ್ರಿಕ್ತ ಜನರ ಪೈಶಾಚಿಕ ಕೃತ್ಯಕ್ಕೆ ಬಲಿಯಾದವರು. ಇವರ ಮೃತ ದೇಹವನ್ನು ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆಯಲಾಗಿದೆ.
ಗುರುವಾರ ಸಂಜೆ ಶಾಬ್-ಇ-ಖದ್ರ್ ನಿಮಿತ್ತ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆದಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಆಯೂಬ್ ಹೊರಭಾಗದಲ್ಲಿ ನಿಂತು ಮಸೀದಿಯಿಂದ ಹೊರ ಬರುತ್ತಿರುವವರ ವಿಡಿಯೋ ಚಿತ್ರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಉದ್ರಿಕ್ತಗೊಂಡ ಜನರ ಗುಂಪು ಅವರನ್ನು ಕಲ್ಲು ಹೊಡೆದು ಬೆತ್ತಲೆಗೊಳಿಸಿ ಜಜ್ಜಿ ಕೊಲೆ ಮಾಡಿದೆ.
ಆಯೋಬ್ ಹತ್ಯೆಗೆ ಭಾರೀ ಖಂಡನೆಗಳು ವ್ಯಕ್ತವಾಗಿದ್ದು, ಜಮ್ಮು ಕಾಶ್ಮೀರದ ಮುಸ್ಲಿಂ ಮೂಲಭೂತವಾದಿಗಳು ಮನುಷ್ಯತ್ವವನ್ನೇ ಮರೆತು ಅನಾಗರಿಕತೆಯತ್ತ ಹೊರಳುತ್ತಿದ್ದಾರೆ ಎಂಬುದನ್ನು ಈ ಘಟನೆ ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.