ನವದೆಹಲಿ: ಸ್ವಚ್ಛ ಭಾರತ ಅಭಿಯಾನದಡಿ ಉತ್ತರಾಖಂಡ ಮತ್ತು ಹರಿಯಾಣ ಭಾರತದ ನಾಲ್ಕು ಮತ್ತು ಐದನೆ ಬಯಲು ಶೌಚಮುಕ್ತ ರಾಜ್ಯಗಳಾಗಿ ಹೊರಹೊಮ್ಮಿವೆ. ಈಗಾಗಲೇ ಸಿಕ್ಕಿಂ, ಹಿಮಾಚಲ ಪ್ರದೇಶ ಮತ್ತು ಕೇರಳ ಬಯಲು ಶೌಚ ಮುಕ್ತ ರಾಜ್ಯಗಳಾಗಿವೆ.
ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ ಕೇವಲ ಎರಡೂವರೆ ವರ್ಷಗಳಲ್ಲಿ ದೇಶದ ನೈರ್ಮಲ್ಯ ಶೇ.42ರಿಂದ ಶೇ.64ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡೆಹ್ರಾಡೂನ್, ಚಂಡೀಗಢ, ಮಂಗಳೂರು ಸೇರಿದಂತೆ ದೇಶದ ಹಲವಾರು ಜಿಲ್ಲೆಗಳು ಈಗಾಗಲೇ ಬಯಲು ಶೌಚಮುಕ್ತವೆಂದು ಘೋಷಿಸಲಾಗಿದೆ.
‘ಸ್ವಚ್ಛ ಭಾರತ ನಿಜವಾದ ಅರ್ಥದಲ್ಲಿ ಜನರ ಚಳುವಳಿಯಾಗಿದ್ದು, ಉತ್ತರಾಖಂಡ, ಹರಿಯಾಣಗಳು ಬಯಲು ಶೌಚಮುಕ್ತಗೊಳ್ಳಲು ಜನರ, ಅಧಿಕಾರಿಗಳ ಪರಿಶ್ರಮ ಕಾರಣ.ಇದೊಂದು ಮಹತ್ವದ ಮೈಲಿಗಲ್ಲು’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.